ಈಜಲು ಹೋಗಿ ನೀರು ಪಾಲಾದ ಯುವಕ
- 15 Jan 2024 , 6:47 AM
- Belagavi
- 109
ಬೆಳಗಾವಿ: ಗೋಕಾಕ ತಾಲೂಕಿನ ಮೇಳವೆಂಕಿ ಗ್ರಾಮದ ಯುವಕನೊಬ್ಬ ಘಟಪ್ರಭಾ ನದಿಯಲ್ಲಿ ಈಜಲು ಹೋಗಿ ಸಾವಿಗೀಡಾದ ಘಟನೆ ಚಿಗಡೊಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕ ರುದ್ರಪ್ಪಾ ವಕ್ಕುಂದ (18) ಮೇಳವೆಂಕಿ ಗ್ರಾಮದವನಾಗಿದ್ದು ನಿನ್ನೆ ಮಧ್ಯಾಹ್ನ ಸ್ನೇಹಿತರ ಜೊತೆ ಚಿಗಡೊಳ್ಳಿ ಗ್ರಾಮದ ಘಟಪ್ರಭಾ ನದಿಯಲ್ಲಿ ಈಜಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಸೇತುವೆ ಬಳಿ ನೀರಿನ ಮಟ್ಟ ಹೆಚ್ಚಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವುದಾಗಿ ಸಂಗಡಿಗರು ತಿಳಿಸಿದ್ದಾರೆ. ಎನ್.ಡಿ.ಆರ್.ಎಫ್ ತಂಡ ಹಾಗೂ ಪೊಲೀಸರ ತಂಡ ನಿನ್ನೆಯಿಂದ ಶೋಧಕಾರ್ಯ ಮುಂದುವರೆಸಿದ್ದು, ಇನ್ನೊಂದು ಕಡೆ ಮೃತ ಯುವಕನ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.











