ಸರಳ ದಸರಾ ಆಚರಣೆಗೆ ಜಿಲ್ಲಾಧಿಕಾರಿಗಳಿಗೆ ಮನವಿ; ಶಾಸಕ ಅನಿಲ ಬೆನಕೆ

ಬೆಳಗಾವಿ: ಬೆಳಗಾವಿಯಲ್ಲಿ ಅನೇಕ ವರ್ಷಗಳಿಂದ ದಸರಾ ಹಬ್ಬವನ್ನು ಅತೀ ವಿಜ್ರಂಭಣೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಈ ವರ್ಷ ಮಹಾಮಾರಿ ಕೊರೋನಾ ಸೋಂಕಿನಿಂದಾಗಿ ಸರಳ ರೀತಿಯಲ್ಲಿ ದಸರಾ ಆಚರಣೆ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದು ಉತ್ತರ ವಿಭಾಗದ ಶಾಸಕರಾದ ಅನಿಲ ಬೆನಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

promotions

ಮೈಸೂರು ದಸರಾ ಅಂದ್ರೆ ಎಲ್ಲರಿಗೂ ಹರ್ಷ, ಆದರೆ ಈ ವರ್ಷ ಕೊರೋನಾ ಮಹಾಮಾರಿ ಬಂದು ಎಲ್ಲ ಹಬ್ಬಗಳಿಗೆ ತಡೆಯೊಡ್ಡಿದೆ. ಸಾಂಪ್ರದಾಯಕವಾಗಿ ಬಂದಿರುವಂತಹ ಹಬ್ಬಗಳನ್ನು ನಿಲ್ಲಿಸದಂತೆ ಅತೀ ಸರಳ ರೀತಿಯಲ್ಲಿ ಆಚರಣೆ ಮಾಡಲು ಅವಕಾಶ ಮಾಡಿ ಕೊಡಬೇಕು ಮತ್ತು ಕೋವಿಡ್ 19 ಗೆ ಇರುವ ನಿಯಮಗಳನ್ನು ಪಾಲನೆ ಮಾಡುತ್ತಾ ಹಬ್ಬವನ್ನು ಆಚರಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

promotions

Read More Articles