ಪ್ರೋಪೈಲ್‌ಟೆಸ್ಟ ಯಂತ್ರ (ಸಸಾರಜನಕ ಪ್ರೋಟೀನ ಪರೀಕ್ಷೆ) ವಿತರಣೆ

  • 14 Jan 2024 , 10:05 PM
  • Haveri
  • 108

ಬ್ಯಾಡಗಿ: ಜೀವಹೋಗುವ ಮುನ್ನಜೀವ ಉಳಿಸುವಲ್ಲಿ ಆಧುನಿಕತಂತ್ರಜ್ಞಾನ, ವೈದ್ಯಕೀಯ ಸಲಕರಣೆಗಳು ಮುಖ್ಯವಾಗಿದ್ದು, ತಮ್ಮಜೀವವನ್ನು ಲೆಕ್ಕಿಸದೆ ವೈದ್ಯಸಿಬ್ಬಂದಿಗಳ ಸೇವೆ ಕೂಡ ಅವಿಸ್ಮರಣೀಯವೆಂದು ಹಿರಿಯವರ್ತಕ ನಾಗಪ್ಪ ಕೆಂಬಿ ತಿಳಿಸಿದರು. ಪಟ್ಟಣದ ಸರ್ಕಾರಿಆಸ್ಪತ್ರೆಗೆ 1.25 ಲ.ರೂ.ವೆಚ್ಚದ ಪ್ರೋಪೈಲ್‌ಟೆಸ್ಟಯಂತ್ರ (ಸಸಾರಜನಕ ಪ್ರೋಟೀನ ಪರೀಕ್ಷೆ) ವಿತರಿಸಿ, ವೈದ್ಯಸಿಬ್ಬಂದಿ ಏರ್ಪಡಿಸಿದ ಸನ್ಮಾನ ಸಮಾರಂಭ ಸ್ವೀಕರಿಸಿದ ಬಳಿಕ ಮಂಗಳವಾರ ಮಾತನಾಡಿದರು. ಕೋವಿಡ್-19 ಹರಡುತ್ತಿರುವ ದಿನಗಳಲ್ಲಿ ಸ್ಥಳೀಯವಾಗಿ ಸಾಕಷ್ಟು ಗಣ್ಯರು ಹಾಗೂ ಜನಸಾಮಾನ್ಯರು ಮೃತಪಟ್ಟಿರುವುದು ನಮಗೆ ತೀವ್ರ ದು:ಖವೆನಿಸಿದೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಸಿಬ್ಬಂದಿಗಳು ನಮ್ಮವರಾಗಿದ್ದು, ಗುಣಮಟ್ಟದ ಸೇವೆಗೆ ಅವರಿಗೆ ಸರ್ಕಾರದಿಂದಅಗತ್ಯಔಷಧಿ, ಸಲಕರಣೆ ಹಾಗೂ ಆಧುನಿಕ ಯಂತ್ರಗಳು, ಹೆಚ್ಚಿನಅಂಬ್ಯುಲೆನ್ಸ ವಾಹನಗಳ ಪೂರೈಸುವಅವಶ್ಯಕತೆಯಿದೆ.ಈ ನಿಟ್ಟಿನಲ್ಲಿಆರೋಗ್ಯ ಇಲಾಖೆ ಪೂರೈಸಿದ್ದರೂ, ಏರುತ್ತಿರುವಜನಸಂಖ್ಯೆ ಹಾಗೂ ಹೊಸಹೊಸ ರೋಗಗಳು ಎಲ್ಲೆಡೆಆವರಿಸುತ್ತಿರುವ ಇಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳು ಬೇಕಿದೆ.ಸ್ಥಳೀಯ ಆಸ್ಪತ್ರೆಯಲ್ಲಿ ಯಂತ್ರಗಳ ಕೊರತೆಯಿದ್ದಲ್ಲಿ ಅನಿವಾರ್ಯವಾಗಿರೋಗಿಯನ್ನು ಹಾವೇರಿ, ಹುಬ್ಬಳ್ಳಿ, ಡಾವಣಗೇರಿದೊಡ್ಡ ಆಸ್ಪತ್ರೆಗಳಿಗೆ ಕಳುಹಿಸುವುದು ಅನಿವಾರ್ಯ.ಇದನ್ನು ತಪ್ಪಿಸಿ ಬಡರೋಗಿಗಳಿಗೆ ಅನುಕೂಲ ಕಲ್ಪಿಸಲುಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು, ಗಣ್ಯವರ್ತಕರು, ಉದ್ಯಮಿಗಳು ಸ್ವಯಂಪ್ರೇರಿತರಾಗಿ ಸಹಕಾರ ನೀಡಲು ಮುಂದಾಗಬೇಕಿದೆ.ತಾವುಇಲ್ಲಿನ ಆಢಳಿತಾಧಿಕಾರಿಯೊಂದಿಗೆ ಚರ್ಚಿಸಿ,ಕೋವಿಡ್ ರೋಗಿಗಳ ಆಸ್ಪತ್ರೆಗೆ ಸಹಕಾರ ಮಾಡುವಇಂಗಿತ ವ್ಯಕ್ತಪಡಿಸಿದಾಗ, ವೈದ್ಯರು ಬಹುಮುಖ್ಯವಾಗಿಜೀವ ಉಳಿಸುವ ಪ್ರೋಪೈಲ್‌ಟೆಸ್ಟಯಂತ್ರದಕೊರತೆಯನ್ನು ತಿಳಿಸಿದರು. ರೋಗಿಯ ಪರೀಕ್ಷೆಗೆ ನಾವು ಹಾವೇರಿಟೆಸ್ಟ ಲ್ಯಾಬ್‌ಗೆ ಕಳುಹಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿಸಾವಿರಾರು ವ್ಯಯಮಾಡುವುದು ಬಡರೋಗಿಗಳಿಂದ ಸಾದ್ಯವಿಲ್ಲವೆಂದು ತಿಳಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಟ್ಟರಾಜ ಮಾತನಾಡಿ, ಮಾರ್ಚ ತಿಂಗಳಿAದ ಕೋವಿಡ್‌ರೋಗಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಂತೆ ವಿವಿಧ ಸಂಘ ಸಂಸ್ಥೆಗಳು ಆಸ್ಪತ್ರೆಗೆ ಸಾಕಷ್ಟು ಸಹಕಾರ ನೀಡಿವೆ. ಮುಖ್ಯವಾಗಿ ನಾಗಪ್ಪ ಕೆಂಬಿ 1.25 ಸಾ.ರೂಯಂತ್ರ, ಜಿ.ಎಸ್.ಸಂಕಣ್ಣನವರಕುಡಿಯಲು ಬಿಸಿನೀರು ಕಾಯಿಸುವ ಯಂತ್ರ 35 ಸಾ.ರೂ, ಎಲ್.ಜಿ.ಪಾಟೀಲ 10 ಸಾ.ರೂ. ಹಾಗೂ ರೋಟರಿ ಸಂಸ್ಥೆ, ವರ್ತಕರ ಸಂಘದ ಸದಸ್ಯರು ವೈದ್ಯಸಿಬ್ಬಂದಿಗಳಿಗೆ ಪಿಪಿಕಿಟ್ ಹಾಗೂ ಮಾಸ್ಕ ಸೇರಿದಂತೆ ಹಲವು ರೀತಿಯಲ್ಲಿ ಸ್ಥಳೀಯ ದಾನಿಗಳು ಸಹಕಾರ ನೀಡಿರುವುದುಶ್ಲಾಘನೀಯವಾಗಿದೆ. ಸಾರ್ವಜನಿಕಆಸ್ಪತ್ರೆಅಭಿವೃದ್ದಿ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನಾಗರಿಕರ ಸಹಕಾರ ಮುಖ್ಯವೆಂದರು. ಈ ಸಂದರ್ಭದಲ್ಲಿ ರೋಟರಿಕ್ಲಬ್ ಅಧ್ಯಕ್ಷ ಡಾ.ಎ.ಎಂ.ಸೌದಾಗರ, ಡಾ.ಗೀತಾ ಕದಮನಹಳ್ಳಿ, ಡಾ.ಶ್ರೀನಿವಾಸ, ಡಾ.ನಾಗರಾಜ, ಡಾ.ರಮೇಶ, ಆಶಾ ಕಾರ್ಯಕರ್ತೆ ಮಂಜುಳಾ ಮಾಸೂರು ಇತರರಿದ್ದರು.

promotions

promotions

Read More Articles