ಸಸಿ ನೆಡುವ ಮೂಲಕ ಪ್ರಕೃತಿ ಮಾತೆಯ ಸೇವೆ

ರಾಯಚೂರು: ನಗರದಲ್ಲಿರುವ ಶ್ರೀ 108 ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠದ ಸಂಸ್ಥಾಪಕ ಕರ್ತೃ ಶ್ರೀ ಕೊಳಂಕಿ ಜೀವೈಕ್ಯ ಗುರುಪಾದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ಪವಿತ್ರ ತಾಣ ಕೊಳಂಕಿಯಲ್ಲಿ ರವಿವಾರ ಗ್ರೀನ್ ರಾಯಚೂರು ,ಶಿಲ್ಪ ಫೌಂಡೇಶನ್ ಮತ್ತು ಲಾಯನ್ಸ ಕ್ಲಬ್ ಸಯುಕ್ತಾಶ್ರಯದಲ್ಲಿ 217 ವಾರದ ನಿರಂತರ ಹಸಿರು ಭಾನುವಾರ ಶ್ರಮದಾನ ಕಾರ್ಯಕ್ರಮದ ಅಂಗವಾಗಿ ಪವಿತ್ರ ಪಂಚವಟಿವೃಕ್ಷ ಗಳ ಸಸಿಯನ್ನು ನೆಡಲಾಯಿತು. ಈ ವೇಳೆ ಮಠದ ವತಿಯಿಂದ ರೇಣುಕಾ ಸ್ವಾಮಿ ಅವರು ಲಾಯನ್ಸ ಕ್ಲಬ್ ಮತ್ತು ಗ್ರೀನ್ ರಾಯಚೂರು ಸದಸ್ಯರು ಪ್ರತಿಯೊಬ್ಬರು ಒಂದೊಂದು ಸಸಿ ನೆಡುವ ಮೂಲಕ ಪ್ರಕೃತಿ ಮಾತೆಯ ಸೇವೆ ಮಾಡಿದರು. ಪರಿಸರ ಸಂರಕ್ಷಣೆ ಉಸಿರಾಡುವ ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ಗ್ರೀನ್ ರಾಯಚೂರಿನ ಕಾರ್ಯದರ್ಶಿ ರಾಜೇಂದ್ರಕುಮಾರ ಎಸ್ ಶಿವಾಳೆ , ಲಾಯನ್ಸ ಕ್ಲಬ್ ನ ಅಧ್ಯಕ್ಷ ವೇಂಕಟೇಶ್ ನಾಯಕ, ಕಾರ್ಯದರ್ಶಿ ನರೇಶ ಕುಮಾರ ಕರ್ಟೋರಿ, ಹೇಮಣ್ಣ ಉಣ್ಣಿ, ಚಂದ್ರಶೇಖರ ಗೌಳಿ, ಈರಣ್ಣ ಕೋಸಗಿ ಸೇರಿದಂತೆ ಸ್ವಯಂ ಸೇವಕರು ಇದ್ದರು.

promotions

promotions

Read More Articles