ದಿಢೀರಣೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನ ಭೇಟಿ ಮಾಡಿದ ಗೋಕಾಕ ಸಾಹುಕಾರ್

ಬೆಳಗಾವಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಹೊಳಿ ದಿಢೀರ್ ಭೇಟಿ ಮಾಡಿದ್ದಾರೆ.

promotions

ನಿನ್ನೆ ಗುರುವಾರ ದಿಢೀರಣೆ ಮುಂಬೈ ತೆರಳಿದ ಸಚಿವ ರಮೇಶ್ ಜಾರಕಹೊಳಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಆಗುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಕರ್ನಾಟಕದಲ್ಲಿ ಕಮಲ ಪಕ್ಷ ಚುಕ್ಕಾಣಿ ಹಿಡಿಯಲು ಬಹು ಮುಖ್ಯ ಪಾತ್ರ ವಹಿಸಿದ್ದ ಪ್ರಭಾವಿ ಮಂತ್ರಿ ರಮೇಶ ಜಾರಕಿಹೊಳಿ ಮಹಾರಾಷ್ಟ್ರಕ್ಕೆ ಇದೀಗ ತಿಂಗಳ ಒಳಗೆ ಮತ್ತೊಮ್ಮೆ ಭೇಟಿಯಾಗಿ ಮಾತುಕತೆ ನಡೆಸಿದ್ದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗುತ್ತಾ ? ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.

promotions

ಕಳೆದ ಮೂರು ವಾರಗಳ ಹಿಂದೆ ಡಿಸಿಎಂ ಲಕ್ಷ್ಮಣ ಸವದಿ ಟಿ.ಪಿ.ತೋರಿಸದೇ ಗೌಪ್ಯವಾಗಿ ಅಲ್ಲಿನ ನಾಯಕರಿಗೆ ಭೇಟಿ ಆಗಿದ್ದರು ಈ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಈ ಭೇಟಿಯಿಂದ ಕುತೂಹಲಕಾರಿ ಬೆಳವಣಿಗೆಯತ್ತ ಮಹಾರಾಷ್ಟ್ರ ರಾಜಕೀಯ ಸಾಗುತ್ತಾ ? ರಾಜ್ಯದ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಮಹಾ ಮೈತ್ರಿ ಉರಳಿಸಲು ಮಹಾರಾಷ್ಟ್ರ ಬಿಜೆಪಿಗೆ ಸಹಕಾರ ನೀಡುತ್ತಿದ್ದಾರಾ? ಎಂಬ ಅನುಮಾನ ಎಲ್ಲರಲ್ಲಿ ಮೂಡತೊಡಗಿದೆ.

Read More Articles