ದಲಿತರ ಮೇಲಾಗುತ್ತಿರುವ ಶೋಷಣೆಯನ್ನು ಇನ್ಮುಂದೆ ನೋಡಲಾಗುವುದಿಲ್ಲ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಎಚ್ಚರಿಕೆ

ಬೆಳಗಾವಿ: ಇತ್ತೀಚಿಗೆ ಉತ್ತರಪ್ರದೇಶದ ಬಲರಾಮಪುರ ಜಿಲ್ಲೆಯ ಹತ್ರಾಸ್ ನಲ್ಲಿ ನಡೆದ ಘಟನೆ ಖಂಡಿಸಿ ಹಲವಾರು ಸಂಘಟನೆಗಳು ಮನವಿ ಸಲ್ಲಿಸಿದರೂ ಅಲ್ಲಿಯ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಹಾಗೂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಂಡಿಸಿ ಇಂದು ಬೆಳಗಾವಿ ಅಂಬೇಡ್ಕರ್ ಗಾರ್ಡನ್ ನಲ್ಲಿ ಮೌನಾಚರಣೆ ಮೂಲಕ ಕಪ್ಪುಪಟ್ಟಿ ಕಟ್ಟಿಕೊಂಡು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಿದರು. ಇಂತಹ ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.

promotions

ಅಲ್ಲಿಯ ಬಿಜೆಪಿ ಸರ್ಕಾರ ಇಂತವರನ್ನು ಶಿಕ್ಷಿಸದೆ ಬಿಟ್ಟಿರುವುದರಿಂದ ಹೆಚ್ಚು ದಲಿತರ ಮೇಲೆ ಅತ್ಯಾಚಾರ ಆಗ್ತಾಯಿದೆ, ಅಲ್ಲಿಯ ಜನರಿಗೆ ಸರಿಯಾಗಿ ಕಾನೂನಿನ ರಕ್ಷಣೆ ಇಲ್ಲ ಆದ್ದರಿಂದ ಬಡವರು, ದೀನ ದಲಿತರು, ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಮಾತನಾಡಿ, ಬಿಜೆಪಿ ಸರ್ಕಾರ ಬಂದಾಗಿಂದ ಅತೀ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯಗಳು ಕಂಡುಬರುತ್ತಿವೆ ಮೊನ್ನೆ ನಡೆದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನಡೆದ ಅತ್ಯಾಚಾರ ಕೊಲೆಗಳಿಗೆ ಅಲ್ಲಿನ ಸರಕಾರಗಳು ಶಿಕ್ಷೆ ನೀಡಿದವು.

promotions

ಆದರೆ ಉತ್ತರ ಪ್ರದೇಶದಲ್ಲಿ ಅವರದೇ ಆದ ಕಾನೂನನ್ನು ರಚಿಸಿಕೊಂಡಂತೆ ಕಾಣುತ್ತಿದೆ. ಇಷ್ಟೆಲ್ಲ ನಡೆದರು ಪ್ರಧಾನ ಮಂತ್ರಿಗಳು ಒಂದು ಮಾತು ಆಡುತ್ತಿಲ್ಲ ಇದು ನಾಚಿಕೆಗೇಡಿತನ ಸಂಗತಿ, ಆದರೆ ಇವೆಲ್ಲವನ್ನೂ ಗಮನಿಸುತ್ತಿರುವ ಕಾಂಗ್ರೇಸ್ ಪಕ್ಷ ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಬೃಹತ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Read More Articles