ಬೆಳಗಾವಿ: ಕರೋನಾದ ಯಾವುದೇ ಭಯವಿಲ್ಲದೆ, ಸಾಮಾಜಿಕ ಅಂತರ ಮರೆತು ಮಾಸ್ಕ್ ಧರಿಸದೆ ದಿನಸಿ ಕಿಟ್ ಪಡೆಯಲು ಸುಮಾರು ಸಾವಿರಕ್ಕೂ ಹೆಚ್ಚು ಮಹಿಳೆಯರು ಜಮಾಯಿಸಿರುವ ಘಟನೆ ಬೆಳಗಾವಿ ನಗರ ಕೇಂದ್ರ ಸಚಿವ ಸುರೇಶ ಅಂಗಡಿ ಕಚೇರಿಯಲ್ಲಿ ನಡೆದಿದೆ. ಮೊದಲೇ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋರೊನಾ ಸಂಖ್ಯೆ ಹೆಚ್ಚಾಗುತ್ತಿದ್ದು ಇದರ ನಡುವೆ ಕರೋನಾದ ಯಾವುದೇ ಭಯವಿಲ್ಲದೆ, ಸಾಮಾಜಿಕ ಅಂತರ ಮರೆತು ಮಾಸ್ಕ್ ಧರಿಸದ ಮಹಿಳೆಯರು ಗುಂಪು ಗುಂಪಾಗಿ ಬಂದಿದ್ದರು. ಅವರನ್ನ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಕೂಡ ಮಾಡಿದ್ದು ಫುಡ್ ಕಿಟ್ ಪಡೆಯಲು ಬಂದವರಲ್ಲಿ ಹಲವರು ಜನರು ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಲಿಲ್ಲ ಬದಲಾಗಿ ಫುಡ್ ಕಿಟ್ ಪಡೆಯಲು ಮುಗಿಬಿದ್ದರು.