ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸಹಾಯಧನ ನೀಡಲು ಒತ್ತಾಯ
- 19 Dec 2023 , 3:50 AM
- Haveri
- 120
ರಾಣೇಬೆನ್ನೂರು: ದಿನದಿಂದ ದಿನಕ್ಕೆ ಕಿಲ್ಲರ್ ಕೋರೋನಾ ರಣಕೇಕೆ ಹಾಕುತಿದೆ. ಈ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಬಾರದು ಎಂದು ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರೂ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅವರಿಗೆ ಮನವಿ ಸಲ್ಲಿಸಿದರು. ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ಸೋಶಿಯಲ್ ಡಿಸ್ಟನ್ಸ್, ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಹಾಕಿಕೊಳ್ಳುವುದು ಕಷ್ಟ. ಅಲ್ಲದೇ ಖಾಸಗಿ ಶಾಲೆಗಳ ಆಡಳಿತಾಧಿಕಾರಿಗಳು ಪೋಷಕರಿಗೆ ಇಲ್ಲಿಯವರಿಗೂ ಅನ್‌ಲೈನ್ ಶಿಕ್ಷಣ ನೀಡುತ್ತಿದ್ದು. ಶುಲ್ಕವನ್ನು ಕಟ್ಟಬೇಕೆಂದು ಹೇಳುತ್ತಿದ್ದಾರೆ. ಆದ ಕಾರಣ ಸರ್ಕಾರ ಖಾಸಗಿ ಶಾಲೆಗಳ ಒತ್ತಾಯಕ್ಕೆ ಒಳಗಾಗದೇ ಸರಿಯಾದ ಕ್ರಮಕೈಗೊಳ್ಳದೇ ಶಾಲೆಗಳನ್ನು ತೆರೆಯಲು ಹೊರಟಿರುವುದು ದುರದೃಷ್ಠಕರವಾಗಿದೆ. ರಾಜ್ಯದ ಮಕ್ಕಳನ್ನು ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ ಒಂದು ವೇಳೆ ಶಾಲೆಗಳನ್ನು ತೆರೆಯಲು ಮುಂದಾಗುವುದರೇ ಜನರ ಹಾಗೂ ಪೋಷಕರ ಒಪ್ಪಿಗೆ ಪಡೆದುಕೊಂಡು ತೆರೆಯಬೇಕು. ಈಗಾಗಲೇ ತಾವುಗಳು ಎಲ್ಲ ನೌಕರರಿಗೆ ಭತ್ಯೆ ನೀಡಿದ್ದು. ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಕೂಡ ಸಹಾಯಧನ ನೀಡಬೇಕೆಂದು ಎಂದು ರಾಜ್ಯ ಕಾರ್ಯದರ್ಶಿ ಕಿರಣ ಗುಳೇದ ಸರ್ಕಾರವನ್ನು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ ಬಲ್ಲೂರು, ಸುಜಾತ ಹುಲ್ಲತ್ತಿ, ಆನಂದ ಹುಲಬನ್ನಿ, ಪ್ರವೀಣ ಇನ್ಯಾಮತಿ, ಶರತ್ ಪೂಜಾರ, ಶಿವು ಹುಲಿಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.












