ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಸಪ್ತಾಹ
- 8 Jan 2024 , 3:30 AM
- Haveri
- 133
ಬಂಕಾಪುರ: ಪಟ್ಟಣದ ಪುರಸಭೆ ಆಶ್ರಯದಲ್ಲಿ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ 2 ರಿಂದ ಅಕ್ಟೋಬರ 10ರ ವರೆಗೆ ಸ್ವಚ್ಛತಾ ಸಪ್ತಾಹ ಕೈಕೊಳ್ಳಲಾಗಿದ್ದು, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಸೇರಿದಂತೆ ಸರ್ವ ಸಿಂಬAದಿಗಳು ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಪ್ರತಿದಿನ ಬೆಳಿಗ್ಗೆ ಸರ್ವ ಸಿಬ್ಬಂದಿಗಳು ಒಂದೋoದು ಏರಿಯಾ ಆಯ್ಕೆ ಮಾಡಿಕೊಂಡು ಸ್ವಚ್ಛತೆಗೆ ಮುಂದಾಗಿದ್ದಾರೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ತ್ಯಜೀಸಿ ಬಟ್ಟೆ ಉತ್ಪನ್ನಗಳನ್ನು ಬಳಕೆಮಾಡುವಮೂಲಕ ಪರಿಸರ ರಕ್ಷಣೆಗೆ ಮುಂದಾಗುವoತೆ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪುರಸಭೆ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲೇಂದರಲ್ಲಿ ಕಸವನ್ನು ಚೆಲ್ಲದೇ ಮನೆಯಲ್ಲಿ ಕಸವನ್ನು ಒಣಕಸ, ಹಸಿಕಸ ಬೇರ್ಪಡಿಸಿಟ್ಟು, ಪುರಸಭೆ ಕಸದವಾಹನ ನಿಮ್ಮ ಮನೆಯ ಬಾಗಿಲಿಗೆ ಬಂದಾಗ ನೀಡಿ ಸಹಕರಿಸಬೇಕು. ಇದು ಪಟ್ಟಣದ ಪ್ರತಿಯೋಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಕಸಮುಕ್ತ ಪಟ್ಟಣವನ್ನಾಗಿಸಿ ಸೋಳ್ಳೆಗಳನ್ನು ತಡೆಗಟ್ಟಿ ರೋಗ ಮುಕ್ತ ಪಟ್ಟಣವನ್ನಾಗಿಸಲು ಸಹಕರಿಸುವಂತೆ ಮನವಿ ಮಾಡಿದರು. ಸಾರ್ವಜನಿಕರ ಸಮಯಕ್ಕೇ ಸರಿಯಾಗಿ ನೀರಿನ ಕರ, ಮನೆಕರ ಸಂದಾಯಮಾಡಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸುವಂತೆ ಸೂಚಿಸಿದರು. ಪುರಸಭೆ ನೈರ್ಮಲ್ಯ ಅಧಿಕಾರಿ ರೂಪಾ ನಾಯ್ಕರ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಿಂಗಪ್ಪ ಹೊಸಮನಿ, ಸಮುದಾಯ ಸಂಘಟಿಕ ಬಿ.ಎಸ್.ಗಿಡ್ಡಣ್ಣವರ, ಹೊನ್ನಮ್ಮ ಕೊಳಲ, ನಿರ್ಮಲಾ ಗುಡಿಮನಿ, ಅಶ್ವೀನಿ ಸುಣಗಾರ, ನೀಲಪ್ಪ ಚೆನ್ನಗೌಡ್ರ, ಮಹದೇವಪ್ಪ ಮಾದರ, ಮಾಲಾ ಕಲಾಲ, ಕಾಮಾಕ್ಷೀ ದೈವಜ್ಞ ಸೇರಿದಂತೆ ಇತರರು ಇದ್ದರು.











