ಲೋಕ ಕಲ್ಯಾಣಾರ್ಥ ಹಾಗೂ ಅಧಿಕ ಮಾಸದ ಪ್ರಯುಕ್ತ ಶ್ರೀಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ

  • 14 Jan 2024 , 10:25 PM
  • Haveri
  • 215

ರಾಣೇಬೆನ್ನೂರು: ಲೋಕ ಕಲ್ಯಾಣಾರ್ಥ ಹಾಗೂ ಅಧಿಕ ಮಾಸದ ಪ್ರಯುಕ್ತ ತಾಲೂಕಿನ ದೇವರಗುಡ್ಡದ ಶ್ರೀ ಮಾಲತೇಶದೇವಸ್ಥಾನದಲ್ಲಿ ಪ್ರಧಾನ ಆರ್ಚಕ ಸಂತೋಷ ಭಟ್ಟ ಪೂಜಾರ ನೇತೃತ್ವದಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜೆ ಮತ್ತು 101 ಗೋರವಯ್ಯನವರಿಗೆ ದೋಣಿಗೆ ಪೂಜೆ ಹಾಗೂ ಕಂಬಳಿಯನ್ನು ವಿತರಿಸಲಾಯಿತು. ಈ ಸಮಯದಲ್ಲಿ ಸಂತೋಷಭಟ್ಟ ಪೂಜಾರ ಮಾತನಾಡಿ, ಇಡೀ ಪ್ರಪಂಚದಲ್ಲಿ ಸಾಂಕ್ರಾಮಿಕ ರೋಗ ಕೊರೋನ್ ಮಹಾಮಾರಿ ತನ್ನಅಟ್ಟಹಾಸ ಮೆರೆಯುತ್ತಿದ್ದು.

promotions

ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಆದ್ದರಿಂದ ಲೋಕ ಕಲ್ಯಾಣಾರ್ಥವಾಗಿ ಹಾಗೂ ಆವರಿಸಿರುವ ಕೋರೋನ ಶಮನಕ್ಕಾಗಿ 101 ಗೋರವಯ್ಯನವರಿಗೆದೋಣಿಗೆ ಪೂಜೆ ಹಾಗೂ ಕಂಬಳಿಯನ್ನು ನೀಡಿ ಶ್ರೀ ಮಾಲತೇಶ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಭಂಡಾರದ ಗುರುಗಳು ಮಲ್ಲಪ್ಪಯ್ಯಒಡೆಯರ್, ಉದಯಕುಮಾರ ವರಗಿರಿ, ನಿಂಗಪ್ಪ ಮುದ್ದಿ, ಹನುಮಂತಪ್ಪ ನಾಯರ್, ದೇವಪ್ಪ ವಾಸರದ, ಪಕ್ಕೀರಪ್ಪ ಐಗಾಳ, ರಾಜು ಮಾಲಾದಾರ, ನಿಂಗಣ್ಣದ್ಯಾಮಣ್ಣನವರು, ಪ್ರಕಾಶ ಬಳ್ಳಾರಿ, ಹನುಮಂತಪ್ಪ ನಾರ‍್ಮ ಚಿಕ್ಕಪ್ಪಚೂರಿ, ಶಂಭಪ್ಪ ಏಳುಕೂರಿ, ಮಾಲತೇಶ ಬುಸಮ್ಮನವರು, ನಿಂಗಪ್ಪ ಚಳಗೇರಿ, ಮೈಲಾರಪ್ಪ ಬುಡಪನಹಳ್ಳಿ, ಗುಡ್ಡಪ್ಪ ಸತಗಿ ಸೇರಿದಂತೆ ಮತ್ತಿತರು ಇದ್ದರು.

promotions

Read More Articles