ಡಿಕೆಶಿ ಪುತ್ರಿ ಐಶ್ವರ್ಯಗೆ ಕೂಡಿ ಬಂತು ಕಂಕಣ ಭಾಗ್ಯ ವರನ್ಯಾರು ಗೊತ್ತೇ ?

ಬೆಂಗಳೂರ: ಕಾಂಗ್ರೆಸ್ ಪ್ರಬಲ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪುತ್ರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಬಿಜೆಪಿ ಹಿರಿಯ ನಾಯಕ ಎಸ.ಎಂ. ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಉದ್ಯಮಿ ದಿವಂಗತ ಸಿದ್ದಾರ್ಥ ಹೆಗಡೆಯವರ ಪುತ್ರ ಅಮರ್ತ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಜೊತೆ ಮದುವೆ ಮಾಡುವ ಕುರಿತು ಮಾತುಕತೆ ನಡೆಸಲಾಗಿದೆ. ಕಾಪಿ ಡೆ ಕಿಂಗ್ ದಿ.ಸಿದ್ಧಾರ್ಥ ಮತ್ತು ಡಿ.ಕೆ.ಶಿವಕುಮಾರ ಮೊದಲಿನಿಂದಲೂ ಇಬ್ಬರಲ್ಲಿ ಉತ್ತಮ ಸ್ನೇಹ ಸಂಬಂಧವಿತ್ತು. ಸದ್ಯ ಎರಡು ಕುಟುಂಬದ ಹಿರಿಯರು ಸೇರಿ ಮದುವೆ ನಿಶ್ಚಯ ಬಗ್ಗೆ ಡಿಕೆಶಿ ಅವರು ಎಸ್.ಎಂ.ಕೆ ಅವರ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ ಅಮೇರಿಕಾದಲ್ಲಿ ಓದಿರುವ ಅಮರ್ತ್ಯ ಹೆಗಡೆ ಸದ್ಯ ಕಾಪಿ ಡೆ ಸಂಸ್ಥೆಯ ವ್ಯವಾಹರವನ್ನು ನೋಡಿಕೊಳ್ಳುತ್ತಿದ್ದಾರೆ ಡಿಕೆಶಿ ಪುತ್ರಿ ಐಶ್ವರ್ಯ ಇಂಜಿನಿಯರಿಂಗ್ ಪದವೀ ಪಡೆದಿದ್ದಾಳೆ.

promotions

Read More Articles