ನೂತನ ರೈತ ಧ್ವನಿ ಟಿ.ವಿ.ಚಾಲನ್ ಲೋಗೋ ಬಿಡುಗಡೆ ಮಾಡಿದ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮಿಜಿ
- 29 Dec 2023 , 11:17 PM
- Haveri
- 114
ಬಂಕಾಪುರ: ಬಸವರಾಜ ಕುರಗೋಡಿ ಸಾರಥ್ಯದಲ್ಲಿ ನಡೆಯಲಿರುವ ಆರ್ಯಾ ಮೀಡಿಯಾ ವಿಜನ್ ರವರ ನೂತನ ರೈತ ಧ್ವನಿ ಟಿ.ವಿ.ಚಾಲನ್ ಲೋಗೋವನ್ನು ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಶ್ರೀಗಳು ಇಗಾಗಲೇ ಆರ್ಯಾ ಮೀಡಿಯಾ ವಿಜನ್ ರವರ ರೈತ ಧ್ವನಿ ಯುಟ್ಯೂಬ್ ಚಾನಲ್ ಪ್ರಾರಂಭವಾಗಿ ರೈತರ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯಾದ್ಯಂತ ರೈತರ ಮನೆ ಮಾತಾಗಿದೆ. ಅದರ ಮುಂದುವರೆದ ಬಾಗವಾಗಿ ರೈತ ಧ್ವನಿ ಟಿ.ವಿ.ಚಾನಲ್‍ನ್ನು ಲೋಕಾರ್ಪಣೆ ಗೋಳಿಸುತ್ತಿರುವುದು ಶುಭದಾಯಕವಾಗಿದೆ. ಇದು ದೇಶಾದ್ಯಂತ ರೈತರ ಸಂಕಷ್ಟಗಳನ್ನು ದೂರಮಾಡುವ ರೈತರ ಪರ ದ್ವನಿಯಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂದು ಹಾರೈಸಿದರು. ನಂತರ ಬಿ.ಜೆ.ಪಿ. ತಾಲೂಕಾ ಅಧ್ಯಕ್ಷ ಹಾಗೂ ಸಾಹಿತಿಗಳಾದ ಶಿವಾನಂದ ಮ್ಯಾಗೇರಿ ಮಾತನಾಡಿ, ಉತ್ತರ ಕರ್ನಾಟಕದ ರೈತ ಧ್ವನಿ ಟಿ.ವಿ.ಚಾನಲ್ ರೈತರ ಏಳಿಗೆಗಾಗಿ ಶ್ರಮಿಸುವಮೂಲಕ ದೇಶಾದ್ಯಂತ ಪ್ರಚಲಿತವಾಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಶಿಧರ ಎಲಿಗಾರ, ಬಿ.ಜೆ.ಪಿ.ತಾಲೂಕಾ ಪ್ರಧಾನ ಕಾರ್ಯದರ್ಶಿ ಸಂತೋಷ ದೊಡ್ಡಮನಿ, ರವಿ ಕುರಗೋಡಿ, ಚಂದ್ರಶೇಖರ ಕೋರಿ, ಪರಶುರಾಮ ನರೇಗಲ್, ದೀಪಕ್ ಪುಕಾಳೆ, ರವಿ ನರೇಗಲ್, ರೈತ ಧ್ವನಿ ಟಿ.ವಿ.ಚಾನಲ್‍ನ ವಸಂತಕುಮಾರ, ಬಸವರಾಜ ಕುರಗೋಡಿ, ನಂದೀಶ, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.












