ಕ್ಷಲ್ಲಕ್ ಕಾರಣದಿಂದ ಶುರುವಾದ ಜಗಳ ಕೊನೆಗೆ ಕೊಲೆಯೊಂದಿಗೆ ಕೊನೆಯಾಗಿದೆ

  • 15 Jan 2024 , 1:13 AM
  • Mysuru
  • 112

ಮೈಸೂರು: ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿರುವ ಟೋಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯ ಹಾಗೂ ಸಿಬ್ಬಂದಿಯೊAದಿಗೆ ನಡೆದ ಜಗಳ ಕೊನೆಗೆ ಕೊಲೆಯೊಂದಿಗೆ ಕೊನೆಯಾಗಿದೆ. ಹೌದು, ಎರೆಡು ದಿನಗಳ ಹಿಂದೆ ಯುವಕನ ಕಾರಿನ ಮಿರರ್ ಡ್ಯಾಮೇಜ್ ಆಗಿರುವ ಕ್ಷಲ್ಲಕ್ ಕಾರಣದಿಂದ ಮಿರರ್ ಸರಿಪಡಿಸಿಕೊಡುವಂತೆ ಸಿಬ್ಬಂದಿಗೆ ಕಾರಿನಲ್ಲಿದ್ದವರು ತಾಕೀತು ಮಾಡಿದ್ರು, ಅದಕ್ಕೆ ಮಾಲೀಕ್ರು ಬಂದ ನಂತರ ಸಿಸಿ ಕ್ಯಾಮರಾ ವಿಶುಯಲ್ಸ್ ಚೆಕ್ ಮಾಡಿ ನಂತರ ಪರಿಹಾರ ಕೊಡ್ತೀವಿ ಅಂತ ಸಿಬ್ಬಂದಿಗಳು ಹೇಳಿದ್ರು. ಆವತ್ತು ಜಾಗ ಖಾಲಿ ಮಾಡಿದ ಯುವಕರ ತಂಡ ನಿನ್ನೆ ರಾತ್ರಿ ಟೋಲ್‌ಗೆ ಬಂದು ಇದೇ ವಿಚಾರವನ್ನ ಮುಂದಿಟ್ಕೊAಡು ಮತ್ತೆ ಕ್ಯಾತೆ ತೆಗೆದಿದೆ. ಯುವಕರು ಮತ್ತು ಸಿಬ್ಬಂದಿಗಳೊAದಿಗೆ ನಡೆದ ಮಾತಿನ ಚಕಮಕಿ ಕೊನೆಗೆÀ ವಿಕೋಪಕ್ಕೆ ತಿರುಗಿ ಯುವಕರ ತಂಡ ಸಿಬ್ಬಂದಿ ಗಣೇಶನ ಮೇಲೆ ಆಯುಧದಿಂದ ಚುಚ್ಚಿದ್ದು ಇದರ ಪರಿಣಾಮ ತೀವ್ರ ರಕ್ತಸ್ರಾವದಿಂದ ಆತ ಆಸ್ಪತ್ರೆಯಲ್ಲಿ ಇವತ್ತು ಮೃತಪಟ್ಟಿದ್ದಾನೆ. ಈ ಘಟನೆಯಿಂದ ಟೋಲ್‌ನಲ್ಲಿರುವ ಸಿಬ್ಬಂದಿಗಳು ನಮಗೆ ರಕ್ಷಣೆಯೇ ಇಲ್ಲ ಅಂತ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಇನ್ನೊಂದು ಕಡೆ ಈ ಘಟನೆಗೆ ಕಾರಣವಾಗಿರುವ ಆರು ಜನ ಹಂತಕರ ಪತ್ತೆಗೆ ಖಾಕಿ ಪಡೆ ಈಗಾಗಲೆ ಜಾಲ ಬೀಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ತಿಕ್ ಟೋಲ್ ಸಿಬ್ಬಂದಿ, ಈ ಟೋಲ್ ಶುರುವಾದ ದಿನಗಳಿಂದ ಒಂದಿಲ್ಲ ಒಂದು ವಿವಾದಕ್ಕೆ ಸಿಲುಕುತ್ತಾ ಬಂದಿದೆ. ಪ್ರತಿದಿನ ಯಾವುದಾದ್ರೂ ವಿಚಾರಕ್ಕೆ ಇಲ್ಲಿ ಗಲಾಟೆ ನಡೆಯೋದು ಸಾಮಾನ್ಯ ಸ್ಥಳೀಯರಿಗೆ ಟೋಲ್ ಸಂಗ್ರಹಕ್ಕೆ ವಿನಾಯಿತಿ ಕೊಡದಿರುವುದೇ ಇಂತಹ ಘಟನೆಗಳಿಗೆ ಕಾರಣ ಅನ್ನೋ ಆರೋಪ ಸ್ಥಳೀಯರದ್ದು ಗಣೇಶ್ ಕುಟುಂಬಕ್ಕೆ ಟೋಲ್ ಮಾಲೀಕರು ಪರಿಹಾರ ಕೊಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

promotions

promotions

Read More Articles