ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿ ಪ್ರಚಾರ ಕಾರ್ಯಕ್ಕೆ ಚಾಲನೆ

  • 15 Jan 2024 , 1:37 AM
  • Haveri
  • 101

ಶಿಗ್ಗಾಂವಿ: ಮಹಾತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ರೈತರ ಕ್ರಿಯಾ ಯೋಜನೆಯ ಕುರಿತು ಗ್ರಾಮ ಪಂಚಾಯತ ಮಟ್ಟದಲ್ಲಿ ಪ್ರಚಾರ ಕೈಗೊಳ್ಳುವ ಪ್ರಚಾರ ವಾಹನಕ್ಕೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ಎಮ್. ತುರಕಾಣಿ ಚಾಲನೆ ನೀಡಿದರು.

promotions

ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲ್ಲಿ ಧ್ವನಿವರ್ಧಕ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ಟೋಬರ್-02 ರಿಂದ 15 ವರೆಗೆ ತಾಲೂಕಿನ 28 ಗ್ರಾಮ ಪಂಚಾಯತಗಳಲ್ಲಿ ರೈತರ ಕ್ರಿಯಾ ಯೋಜನೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

promotions

ಈ ಕ್ರಿಯಾ ಯೋಜನೆಯಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಎಲ್ಲ ಫಲಾನುಭವಿಗಳಿಂದ ವೈಯಕ್ತಿಕ ಕಾಮಗಾರಿ ಬೇಡಿಕೆ ಸ್ವೀಕೃತಿಯಾಗಬೇಕಿದೆ, ಇದಕ್ಕಾಗಿ ಗ್ರಾಮ ಪಂಚಾಯತ ಮಟ್ಟದ ಎಲ್ಲ ಗ್ರಾಮಗಳಲ್ಲಿ ಕಡ್ಡಾಯವಾಗಿ ಧ್ವನಿವರ್ದಕದ ಮೂಲಕ ಪ್ರಚಾರ ಕೈಗೊಳ್ಳಬೇಕು ಹಾಗೇಯೇ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯನ್ನು ಇಡುವುದು, ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಹಿಂದಿರುಗಿರುವ ಕೂಲಿಕಾರರು ಯೋಜನೆಯಡಿ ಕೆಲಸ ಮಾಡಬೇಕಿದೆ, ಉದ್ಯೋಗ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಅಕುಶಲ ಉದ್ಯೋಗದೊಂದಿಗೆ 27500/- ರೂ. ಪಡೆಯಲು ಅವಕಾಶ ಮಾಡಿದೆ ಈ ಗ್ರಾಮ ಪಂಚಾಯತ ಮಟ್ಟದಲ್ಲಿ ಆಧ್ಯತೆ ಮೇರೆಗೆ ಮಾಹಿತಿ ಫಲಕ, ಉದ್ಯೋಗ ಚೀಟಿ ಮಾಹಿತಿ ಪ್ರದರ್ಶನ, ಆರೋಗ್ಯ ಸೌಲಭ್ಯ ವ್ಯವಸ್ಥೆ ಇದ್ದರೆ ಐ.ಇ.ಸಿ. ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ಪ್ರಚಾರ ವಾಹನ ಸಂಚರಿಸುವ ಗ್ರಾಮಗಳ ಜನರಿಗೆ ರೈತರಿಂದ ರೈತರಿಗೋಸ್ಕರ ಕ್ರಿಯಾ ಯೋಜನೆ ಗ್ರಾಮ ಪಂಚಾಯತ ಮಟ್ಟದ ಎಲ್ಲ ಅರ್ಹ ಫಲಾನುಭವಿಗಳಿಂದ ವೈಯಕ್ತಿಕ ಕಾಮಗಾರಿ ಬೇಡಿಕೆ, ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಕೃಷಿ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ವಲಯ ಅರಣ್ಯ ಇಲಾಖೆಗಳ ವೈಯಕ್ತಿಕ ಕಾಮಗಾರಿಗಳ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು, ಸಂದೀಪ ಎಸ್.ಡಿ, ಸಹಾಯಕ ನಿರ್ದೇಶಕರು, ಕೋರಿ, ಸಹಾಯಕ ಲೆಕ್ಕಾಧಿಕಾರಿ, ಅಶೋಕ ಕುಂಬಾರ, ಸಹಾಯಕ ನಿರ್ದೇಶಕರು, ಮಹದೇವ ಹೂಗಾರ, ಎಮ್.ಐ.ಎಸ್. ಸಂಯೋಜಕರಾದ ರಾಜೇಶ್ವರಿ, ಬಿ.ಎನ್, ಐ.ಇ.ಸಿ. ಸಂಯೋಜಕರು, ತಾಲೂಕ ಪಂಚಾಯತ ಸಿಬ್ಬಂದಿ, ಬಿ.ಎಫ್.ಟಿ ಇತರರು ಹಾಜರಿದ್ದರು.

Read More Articles