ಕರ್ನಾಟಕ ಭೀಮ್ ಸೇನೆ ಸಮೀತಿ ವತಿಯಿಂದ ತಹಶೀಲ್ದಾರಗೆ ಮನವಿ

  • 15 Jan 2024 , 2:26 AM
  • Haveri
  • 302

ಶಿಗ್ಗಾವಿ : ಜಾತಿ ನಿಂದನೆ ಮಾಡಿದವರ ಪರವಹಿಸಿದ ಶಿಗ್ಗಾವಿ ಸಿಡಿಪಿಓ ನೀತಾ ವಾಡಕರ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಭೀಮ್ ಸೇನೆ ಸಮೀತಿ ವತಿಯಿಂದ ತಾಲೂಕಾ ತಹಶೀಲ್ದಾರ ಪ್ರಕಾಶ ಕುದುರಿ ಅವರಿಗೆ ಮನವಿ ಸಲ್ಲಿಸಲಾಯಿತು.

promotions

ಸಿಡಿಪಿಓ ಅವರು ಹನಕÀನಹಳ್ಳಿ ಗ್ರಾಮದ ಕಲವರಿಂದ ಕಿರುಕುಳ ಮತ್ತು ಜೀವಬೇದರಿಕೆ ಒಳಗಾಗಿದ್ದ ಶಿಗ್ಗಾವಿ ತಾಲೂಕಿನ ಹನಕನಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿ ಅಕ್ಕಮ್ಮ ಛಲವಾದಿ ಇವರ ಸಹಾಯಕ್ಕೆ ಬಾರದೆ ಶಿಕ್ಷಕಿಯನ್ನೆ ಬೇರೆ ಗ್ರಾಮಕ್ಕೆ ವರ್ಗಾವಣೆ ಮಾಡಿದ ನೀತಾ ವಾಡ್ಕರರವರನ್ನು ತಕ್ಷಣ ಅಮಾನತು ಮಾಡಬೇಕು.

promotions

ಹನಕನಹಳ್ಳಿ ಗ್ರಾಮದ ಸಲೀಂ ಹಂಚಿನಮನಿ ಮತ್ತು ಜಗದೀಶ ಶಲಗಿನಕಟ್ಟಿ ಅಂಗನವಾಡಿ ಶಿಕ್ಷಕಿ ಅಕ್ಕಮ್ಮ ಛಲವಾದಿ ಇವರಿಗೆ ಅವಾಛ್ಯ ಶಭ್ದಗಳಿಂದ ನಿಂದನೆ ಮತ್ತು ಜೀವಬೇದರಿಕೆ ಹಾಕಿದ್ದಾರೆ ಈ ಕುರಿತು ಕೆಲ ದಿನಗಳ ಹಿಂದೆ ಅಕ್ಕಮ್ಮ ಛಲವಾದಿ ಇವರು ಸಿಡಿಪಿಓ ಅಧಿಕಾರಿಗಳಿಗೆ ದೂರು ನೀಡಿದ್ದರು ಈ ಕುರಿತು ಸರಿಯಾಗಿ ವಿಚಾರಣೆ ಮಾಡದೆ ಸಿಡಿಪಿಓ ನೀತಾ ವಾಡ್ಕರವರು ಶಿಕ್ಷಕಿಯನ್ನೆ ಹನಕನಹಳ್ಳಿ ಗ್ರಾಮದಿಂದ ಲೆಕ್ಕಿಕೊಪ್ಪ ಗ್ರಾಮಕ್ಕೆ ವರ್ಗಾವಣೆ ಮಾಡಿರುತ್ತಾರೆ, ಇದರಿಂದ ತೀವ್ರ ಮನನೊಂದು ಅನಾರೋಗ್ಯದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೇಯ ತೀರ್ವ ನಿಗಾಘಟಕದಲ್ಲಿದ್ದಾರೆ.

ಭಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಗೆ ಸಹಾಯಕ್ಕೆ ಬಾರದೆ ನಿರ್ಲಕ್ಷ ತೋರಿ ವರ್ಗಾವಣೆ ಶಿಕ್ಷೆ ನೀಡಿ ಬೇಜಾವಾಬ್ದಾರಿತನ ನಡೆದುಕೊಂಡಿರುವ ಸಿಡಿಪಿಓ ನೀತಾ ವಾಡ್ಕರವರನ್ನು ಕೂಡಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಮಾನತು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕರ್ನಾಟಕ ಬೀಮ್ ಸೇನೆ ಸಮೀತಿ ಅದ್ಯಕ್ಷ ಮಂಜುನಾಥ ಇಂಗಳಗಿ, ಮಂಜುನಾಥ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಮಂಜುನಾಥ ಹರಿಜನ, ರವಿ ಕೋಣಪ್ಪನವರ, ಪ್ರಮೋದ್ ಛಲವಾದಿ, ಮಾರುತಿ ನಡವಲಕೆರೆ, ಸದಾನಂದ ಮಾದರ, ಮಂಜು ಹರಿಜನ, ಮಂಜು ನಡುವಿನಮನಿ, ಮೈಲಾರಿ ಹರಿಜನ, ಸೋಮಶೇಖರ ಹತ್ತಿಮತ್ತೂರ, ಪ್ರಕಾಶ ದೊಡ್ಡಮನಿ, ಫಕ್ಕೀರೇಶ ಚಾಕಾಪೂರ, ಮಾಂತೇಶ ಬಡ್ನಿ, ನಿಂಗಪ್ಪ ಚಾಕಾಪೂರ ಸೇರಿದಂತೆ ಇತರರು ಇದ್ದರು.

Read More Articles