ಮುಂದುವರೆದ ವರುಣನ ಆರ್ಭಟ: ಕಂಗಾಲಾದ ಅನ್ನದಾತ

ಬೆಳಗಾವಿ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು ಧಾರಾಕಾರ ಮಳೆಯಿಂದಾಗಿ ಹಲೆಡೆಗಳಲ್ಲಿ ರಸ್ತೆ ಸಂಚಾರ ಬಂದಾದರೆ, ಕೆಲವು ಗ್ರಾಮಗಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಗಳು ಕುಸಿದಿವೆ ಇದರಿಂದಾಗಿ ಜನರು ಪರದಾಡುತ್ತಿದ್ದಾರೆ.

promotions

ಜಿಲ್ಲೆಯ ಕಳೆದ 24 ಗಂಟೆಗಳ ಧಾರಾಕಾರವಾಗಿ ಮಳೆ ಸುರಿದಿದೆ. ವರುಣನ ಆರ್ಭಟದಿಂದಾಗಿ ಅಥಣಿ, ಹುಕ್ಕೇರಿ ತಾಲೂಕಿನಾದ್ಯಂತ ಜನರು ತತ್ತರಿಸಿದ್ದಾರೆ. ಮೊನ್ನೆ ಆದ ಮಳೆಯಿಂದಾಗಿ ಹುಕ್ಕೇರಿ ಜನತೆ ಬೆಚ್ಚಿ ಬಿದ್ದಿದ್ದರು.

promotions

ನಿನ್ನೆ ಮಳೆಗೆ ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮ ದೇವಸ್ಥಾನ ಸಂಪೂರ್ಣ ನೀರಲ್ಲಿ ಮುಳುಗಿದ್ದು, ಹಲವು ಮನೆಗಳು, ಅಂಗಡಿ ಮುಗ್ಗಟ್ಟಗಳು ಸಂಪೂರ್ಣ ಜಲಾವೃತವಾಗಿವೆ ರಸ್ತೆ ಸಂಚಾರ ಸಂಪೂರ್ಣ ಬಂದಾಗಿದೆ. ಇನ್ನೊಂದು ಕಡೆ ಮಳೆಯಿಂದಾಗಿ ರೈತ ಕಂಗಾಲಾಗಿದ್ದು ಆತನ ಬೆವರಿನ ಶಮವೆಲ್ಲ ನೀರಾಗಿ ಹರಿಯುತ್ತಿದೆ.

ಈಗಾಗಲೇ ಕಳೆದ ವರ್ಷ ನೆರೆ ಹಾವಳಿಯಿಂದಾಗಿ ರೈತರು ಭಾರಿ ನಷ್ಟ ಅನುಭವಿಸಿದ್ದರು. ಈ ಬಾರಿಯೂ ನಷ್ಟಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣ ಸರ್ವೆ ಮಾಡಿ ರೈತರಿಗೆ ಪರಿಹಾರ ನೀಡಬೇಕೆಂಬುವುದು ಜನರ ಹಂಬಲವಾಗಿದೆ.

Read More Articles