ವಿದ್ಯಾರ್ಥಿಯ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ ನಿಯತಿ ಫೌಂಡೇಶನ್
- 15 Jan 2024 , 12:47 AM
- Belagavi
- 100
ಬೆಳಗಾವಿ: ನಿಯತಿ ಫೌಂಡೇಶನ್ ಸಂಸ್ಥಾಪಕರು ಹಾಗೂ ಅಧ್ಯಕ್ಷೆಯರಾದ ಡಾ. ಸೋನಾಲಿ ಸರ್ನೋಬತ್ ಅವರು ಬೆಳಗಾವಿ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಹಲವಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ.

ವೈದ್ಯ ವೃತ್ತಿಯೊಂದಿಗೆ ಸಮಾಜದಲ್ಲಿ ಹಲವರು ಜನಪರ ಕಾರ್ಯಗಳನ್ನು ಮಾಡುತ್ತಾ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ಇಂದು ಮಾಸ್ಟರ್ ಸಿದ್ಧಾರ್ಥ್ ಸರೋಲ್ಕರ್ ಎಂಬ ವಿದ್ಯಾರ್ಥಿಗೆ ಮುಂದಿನ ಶಿಕ್ಷಣಕ್ಕೆ ಆರ್ಥಿಕ ನೆರವುಗಾಗಿ ನಿಯತಿ ಫೌಂಡೇಶನ್ ವತಿಯಿಂದ ಡಾ.ಸಮೀರ್ ಮತ್ತು ಡಾ.ಸೋನಾಲಿ ಸರ್ನೋಬತ್ ಸೇರಿ 2020-21ನೇ ಸಾಲಿನ ವಿದ್ಯಾರ್ಥಿ ವೇತನ ನೀಡಿ ಆತನಿಗೆ ಪ್ರೋತ್ಸಾಹಿಸಿದ್ದಾರೆ.


ಮಹಾಮಾರಿ ಕೊರೋನಾದಿಂದಾಗಿ ಇನ್ನು ಶಾಲೆಗಳು ಆರಂಭವಾಗಿಲ್ಲ. ಆದರೆ ಮಕ್ಕಳ ಓದು ನಿಲ್ಲಿಸಬಾರದು ಎಂಬ ಉದ್ದೇಶದಿಂದ ನಿಯತಿ ಪೌಂಡೇಶನ್ ವತಿಯಿಂದ ಹಲವಾರು ಮಕ್ಕಳಿಗೆ ಸಹಾಯಧನ ನೀಡಿದ್ದಾರೆ.










