ಶ್ರೀ ಶಂಭುಲಿoಗೇಶ್ವರನಿಗೆ ವಿಷೇಶ ಪೂಜೆ

  • 15 Jan 2024 , 1:42 AM
  • Haveri
  • 113

ಬಂಕಾಪುರ: ಸಹಸ್ರಾರು ಭಕ್ತ ಸಮೂಹ ಕೂಡಲದ ವರದಾ ನದಿಯಲ್ಲಿ ಶ್ರೀ ಶಂಭುಲಿoಗನ ತೆಪ್ಪೋತ್ಸವ ಮಾಡುವ ಮೂಲಕ ಅಧಿಕಮಾಸದ ಶ್ರೀ ಶಂಭುಲಿoಗನ ಮಹಾ ಪೂಜೆಗೆ ಸಮಾರೋಪ ಹಾಡಿದರು.

promotions

ಪ್ರತಿ ಮೂರು ವರ್ಷಕ್ಕೋಮ್ಮೆ ಬರುವ ಅಧಿಕ ಮಾಸದ ಪ್ರತಿ ಸೋಮವಾರಗಳಂದು ಹುತ್ತದ ಮಣ್ಣಿನಿಂದ ಶ್ರೀ ಶಂಭುಲಿoಗ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಆ ದಿನದಂದು ಅಡುಗೆಗೆ ಯಾವುದೇ ಹುಳಿ, ಉಪ್ಪು, ಖಾರ ವನ್ನು ಬಳಸದೆ ಅಡುಗೆ ತಯಾರಿಸಿ, ಶ್ರದ್ಧಾ ಭಕ್ತಿಯಿಂದ ಪ್ರತಿಷ್ಠಾಪಿಸಿದ ಶಂಭುಲಿAಗ ಸ್ವಾಮಿಗೆ ಸಹಶ್ರನಾಮಾವಳಿಯೋಂದಿಗೆ ಭಿಲ್ವಪತ್ರೆ ಧಾರಣೆ ಮಾಡುವ ಮೂಲಕ ಅತ್ಯಂತ ಮಡಿಯಿಂದ ಪೂಜಿಸಲಾಗುತ್ತದೆ. ಅಧಿಕ ಮಾಸದ ನಾಲ್ಕು ಸೋಮವಾರ ಪೂಜಿಸಿದ ಹುತ್ತದ ಮಣ್ಣಿನ ಶಂಭುಲಿoಗನ ಮೂರ್ತಿಯನ್ನು ವಿವಿದ ಆಕಾರದ ತೆಪ್ಪವನ್ನು ಮಾಡಿ ಅದಕ್ಕೆ ಅಲಂಕರಿಸಿ ಅದರಲ್ಲಿ ಶಂಭುಲಿoಗನನ್ನು ಪ್ರತಿಷ್ಠಾಪಿಸಿ ಪೂಜಿಸಿ ಇಷ್ಠಾರ್ಥ ಸಿದ್ಧಿಗಾಗಿ ಬೇಡಿ ಕೋಳ್ಳುತ್ತಾರೆ.

promotions
logintomyvoice

ಅಧಿಕ ಮಾಸದಲ್ಲಿ ಮಾಡುವ ಈ ಪೂಜೆಗೆ ಇಷ್ಠಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇಂದಿನ ವರೆಗೆ ನಡೆದುಕೋಂಡು ಬಂದಿದೆ. ನಂತರ ಪೂಜೆಗೈದ ದಂಪತಿಗಳ ಸಮೇತ ಕೂಡ್ರಿಸಿ ನೆರೆ, ಹೋರೆ, ಬಂಧು ಮಿತ್ರರು ಆರತಿ ಗೈದು ಶುಭ ಕೋರುತ್ತಾರೆ. ನಂತರ ಸರ್ವರು ಸಹಬೋಜನ ಸವಿದು ಸಂಭ್ರಮಿಸಿದರು.

Read More Articles