ಬೆಳಗಾವಿಯ ಉಸ್ತುವಾರಿ ಮಂತ್ರಿಗಳಾಗಿ ನೇಮಕಗೊಂಡ ಹಿನ್ನಲೆ ಇಂದು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಲಿರುವ : ಗೋಕಾಕ ಸಾಹುಕಾರ..!

ಬೆಳಗಾವಿ: ಬೆಳಗಾವಿಯ ಉಸ್ತುವಾರಿ ಮಂತ್ರಿಗಳಾಗಿ ರಮೇಶ್ ಜಾರಕಿಹೊಳಿ ನೇಮಕಗೊಂಡಿದ್ದ ಹಿನ್ನಲೆ ಇಂದು ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಲಿದ್ದು. ಈಗಾಗಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಲ್ಲಿ ಅವರು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಾಮಾಜಿಕ ವ್ಯಕ್ತಿಗತ ಅಂತರ ಕಾಪಾಡಿಕೊಂಡು ಭೇಟಿ ಮಾಡಲು‌ ಬನ್ನಿ ಹಾಗೂ ಅಭಿನಂದಿಸಲು ಯಾರೂ ಹಾರ, ತುರಾಯಿಗಳನ್ನು ತರಬೇಡಿ ಎಂದು ರಮೇಶ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಕುಂದುಕೊರತೆಗಳನ್ನು ಆಲಿಸಲಿಸಿ ನಂತರ ಜಿಲ್ಲಾ ಪಂಚಾಯತನಲ್ಲಿ ಕೋವಿಡ್ 19 ಮತ್ತು ನೆರೆ ಹಾವಳಿ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

promotions

Read More Articles