ಸರ್ಕಾರ ರೈತರ ಸಂಕಷ್ಟಕ್ಕೆ ಸ್ಫಂದಿಸದಿದ್ದರೆ ಉಗ್ರಹೋರಾಟ , ಶ್ರೀಕಾಂತ ದುಂಡಿಗೌಡ್ರ

  • 15 Jan 2024 , 1:28 AM
  • Haveri
  • 169

ಶಿಗ್ಗಾವಿ: ರೈತರು ಅತಿವೃಷ್ಠಿ, ಅನಾವೃಷ್ಠಿ, ಬೆಳೆಹಾನಿ, ಬೆಳೆಗೆ ಸಮರ್ಪಕ ಬೆಲೆಸಿಗದೆ ಸಂಕಷ್ಟದಿAದ ಕೃಷಿಯನ್ನೆ ಬಿಡುವ ಹಂತಕ್ಕೆ ಬಂದಿದ್ದಾರೆ ಸರ್ಕಾರ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಫಂದಿಸದಿದ್ದರೆ ಸರ್ಕಾರದ ವಿರುದ್ದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ ಎಚ್ಚರಿಸಿದರು. ಅವರು ತಾಲೂಕಿನ ಮುಗಳಿ ಹಾಗೂ ಬನ್ನೂರ ಗ್ರಾಮಗಳ ಅತಿವೃಷ್ಟಿಯಿಂದ ಬೆಳೆಹಾನಿಗೊಳಗಾದ ಕೃಷಿ ಜಮೀನುಗಳನ್ನು ವೀಕ್ಷಿಸಿ ರೈತರ ಸಂಕಷ್ಟಗಳನ್ನು ಆಲಿಸಿ ಹೆದರದಿರಿ ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇವೆ ಎಂದು ಬರವಸೆ ನೀಡಿ ಮಾತನಾಡಿದ ಅವರು ಹಲವಾರು ಗ್ರಾಮಗಳಲ್ಲಿ ಸಾವಿರಾರು ಎಕರೆ ಕೃಷಿಭೂಮಿಯಲ್ಲಿ ಬೆಳೆ ಉತ್ತಮವಾಗಿ ಬಂತು ಎನ್ನುವ ವೇಳೆಗೆ ಸತತವಾದ ಬಾರಿ ಮಳೆಗೆ ರೈತ ಬೆಳೆಗಳು ಹೊಲದಲ್ಲಿಯೇ ಹಾಳಾಗಿ ರೈತರು ಹಾಕಿದ ಬಂಡವಾಳ ಕೂಡಾ ತೆಗೆದುಕೊಳ್ಳಲಾಗದ ಪರಿಸ್ಥಿತಿಯಿಂದ ಸಂಕಷ್ಟದ ಪರಿಸ್ಥಿತಿ ಇದ್ದರೂ ಇಂತ ಸಮಯದಲ್ಲಿ ರೈತರ ಮದ್ಯ ಇದ್ದು ಅವರ ಕಷ್ಟಗಳಿಗೆ ಸ್ಫಂದಿಸಿ ಧೆÊರ್ಯಹೇಳಬೇಕಾದ ಚುನಾಯಿತ ಪ್ರತಿನಿಧಿಗಳು, ಸಂಭAದಪಟ್ಟ ಇಲಾಖೆ ಅಧಿಕಾರಿಗಳು ಬರದೆ ಇರುವ ಕಾರಣ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ರೈತರೊಂದಿಗೆ ಚರ್ಚಿಸಿ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ ಎಂದರು.

promotions

ಸರ್ಕಾರ ಇಂತ ರೈತರ ಸಂಕಷ್ಟಗಳಿಗೆ ಸ್ಪಂದಿಸದೆ ಗಾಂಜಾ, ಡ್ರಗ್ಸ್ ಮುಂತಾದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ರೈತರನ್ನು ನಿರ್ಲಕ್ಷಿಸುತ್ತದೆ, ಗಾಂಜಾ ಡ್ರಗ್ಸ್ದಂದೆಗೆ ಕಾನೂನು ಶಿಕ್ಷೆ ನೀಡಿ ಅದರಲ್ಲಿ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಾರೆ. ನೀವು ಅದರತ್ತವೆ ಪೂರ್ಣ ಗಮನ ನೀಡಿ ಅನ್ನದಾತ ರೈತರನ್ನು ಮರೆಯಬೇಡಿ ಎಂದು ಸರ್ಕಾರವನ್ನು ಎಚ್ಚರಿಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್.ಎನ್.ವೆಂಕೋಜಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆದೊರಕುತ್ತಿಲ್ಲ. ಒಂದು ಎಕರೆ ಗೊವಿನಜೋಳ ಬೆಳೆಯಲು 20 ಸಾವಿರ ಕರ್ಚುಮಾಡಿ 20 ಕ್ವಿಂಟಲ ಗೋವಿನಜೋಳ ಬೆಳೆದರೆ ಕ್ವಿಂಟಲ್‌ಗೆ 12 ನೂರು ರೂ ಬೆಲೆಗೆ ಮಾರಿದರೆ ರೈತರ ಶ್ರಮದ ಪಲವೇನು ಬದುಕು ಹೇಗೆ.

promotions

ಮಾರುಕಟ್ಟೆಯಲ್ಲಿ ಒಂದು ಚಪ್ಪಲಿಗೆ ಕೂಡಾ ಇಷ್ಟು ಬೆಲೆ ಎಂದು ಲೇಬಲ್ ಹಚ್ಚಿ ಮಾರಲಾಗುತ್ತದೆ. ಆದರೆ ರೈತರ ಬೆಳೆಗೆ ಯಾವುದೇ ಬೆಲೆ ಇಲ್ಲ ಒಮ್ಮೆಲೆ ಕುಸಿತಕಂಡು ರೈತರ ಜೀವವನ್ನೆ ಬಲಿ ಪಡೆಯುತ್ತದೆ ಸರ್ಕಾರ ಸರಿಯಾದ ಬೆಂಬಲ ಬೆಲೆ ನೀಡಬೇಕು ಗೋವಿನ ಜೋಳಕ್ಕೆ ಕನಿಷ್ಟ 5 ಸಾವಿರ, ಶೇಂಗಾ ಬೆಳೆಗೆ ಕನಿಷ್ಟ 10 ಸಾವಿರ ಬೆಂಬಲ ಬೆಲೆ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಣ್ಣ ನಡುವಿನಮನಿ ಕಾರ್ಯಧ್ಯಕ್ಷ ವೀರೇಶ ಆಜೂರ, ಉಪಾಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪೂಜಾರ, ಮಾಜಿ ಜಿಪಂ ಆಧ್ಯಕ್ಷ ಗುಡ್ಡಪ್ಪ ಜಲದಿ, ಎಸ್.ಎಪ್.ಮಣಕಟ್ಟಿ, ಮುಸ್ತಾಕ ಮುಲ್ಲಾ, ಪರಶುರಾಮ ಕಾಳೆ, ಗುರು ಅಣ್ಣಿಗೇರಿ, ಸೇರಿದಂತೆ ಗ್ರಾಮಗಳ ರೈತರು ಉಪಸ್ಥಿತರಿದ್ದರು.

Read More Articles