ಹೆಚ್ಚಿನ ಅಭಿವೃದ್ಧಿಯ ಕೆಲಸಗಳನ್ನು ಹೊತ್ತು ತರುವ ಆಶಯಗಳೊಂದಿಗೆ ನಿಮ್ಮ ಮನೆ ಮಗಳು ಲಕ್ಷ್ಮೀ ಹೆಬ್ಬಾಳಕರ ಯಾವತ್ತಿಗೂ ಬದ್ದ ಎಂದ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ತಾಲೂಕಿನ ಬಾಳೇಕುಂದ್ರಿ ಬಿ ಕೆ ಗ್ರಾಮದ ಮಾರುತಿ ಗಲ್ಲಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆಯ ಅನುದಾನದಲ್ಲಿ ಒಟ್ಟು ಹದಿನೈದು ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ರಸ್ತೆಯ ಕಾಮಗಾರಿಗಳು ಒಳ್ಳೆಯ ಗುಣಮಟ್ಟದಿಂದ ಕೂಡಿರಬೇಕು ಸಮಯಕ್ಕೆ ಅನುಗುಣವಾಗಿ ಮಾಡಿ ಮುಗಿಸಲು ಈಗಾಗಲೇ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಕ್ಷೇತ್ರದಲ್ಲಿ ಎಲ್ಲ ಅಭಿವೃದ್ಧಿಯ ಕೆಲಸಗಳು ಹಂತ ಹಂತವಾಗಿ ಜನರ, ಪ್ರೀತಿ, ಪ್ರೋತ್ಸಾಹಗಳ ಮೂಲಕ ನಡೆಯುತಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಯ ಕೆಲಸಗಳನ್ನು ಹೊತ್ತು ತರುವ ಆಶಯಗಳೊಂದಿಗೆ ನಿಮ್ಮ ಮನೆ ಮಗಳು ಲಕ್ಷ್ಮೀ ಹೆಬ್ಬಾಳಕರ ಯಾವತ್ತಿಗೂ ಬದ್ದ ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಪಂಚಾಯತ್ ಸದಸ್ಯೆ ತಬ್ಸುಮ್ ಮುಲ್ಲಾ, ನೂರ್ ಅಹ್ಮದ್ ಮುಲ್ಲಾ, ಅಪ್ಜಲ್ ಜಮಾದಾರ, ಜಮೀಲ್, ಪರಲೋಕ್ ಪಾಟೀಲ, ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

promotions

Read More Articles