ಕರಡಿ ಹಾವಳಿ ತಡೆಯುವಂತೆ ಅರಣ್ಯಧಿಕಾರಿಗೆ ಕರವೇ ಕಾರ್ಯಕರ್ತರಿಂದ ಮನವಿ

  • 15 Jan 2024 , 12:26 AM
  • Haveri
  • 191

ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ದುಂಡಶಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಮನುಷ್ಯರ ಮೇಲೆ ಕರಡಿಗಳು ಮಾರಣಾಂತಿಕ ಹÀಲ್ಲೆ ಮಾಡುತ್ತಿದ್ದು ಕರಡಿಗಳಿಂದ ಮನುಷ್ಯರನ್ನು ರಕ್ಷಣೆ ಮಾಡಬೇಕು ಹಾಗೂ ಕರಡಿ ದಾಳಿಯಿಂದ ಹಲ್ಲೆಗೋಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರವೆ (ಪ್ರವೀಣಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಈ ವಲಯದ ಅಧಿಕಾರಿ ರಮೇಶ ಶೇತಸನದಿ ರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಶ್ರೀ ಮಂಜುನಾಥ ಓಲೇಕಾರ ಮಾತನಾಡಿ ಈ ವಲಯದ ಅರಣ್ಯ ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳ ಜಮೀನುಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊoಡಿವೆ. ಕಳೆದ ಹಲವಾರು ವರ್ಷಗಳಿಂದ ಹಲವರ ಮೇಲೆ ದಾಳಿ ಮಾಡಿರುವ ಕರಡಿಗಳು ಮೊನ್ನೆ ಕಳೆದ 10 ದಿನಗಳ ಹಿಂದೆ ಬಸವನಕೊಪ್ಪ ಜಮೀನಿನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಾಗ ನ್ಯಾಸರ್ಗಿ ಗ್ರಾಮದ ಒಬ್ಬರ ಮೇಲೆ ದಾಳಿ ಮಾಡಿದ್ದವು ಆತ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆ ಮತ್ತೆ ನಿನ್ನೆ ಜೊಂಡಲಗಟ್ಟಿ ಗೌಳೇರದಡ್ಡಿಯವರಾದ ರಾಮು ಎಡಗೆ ಎಂಬುವನ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿವೆ. ರೈತರು ಪ್ರತಿನಿತ್ಯ ಜಮೀನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ ಕರಡಿಗಳು ಮನುಷ್ಯರ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡುತ್ತಿವೆ. ಕೂಡಲೆ ಅರಣ್ಯ ಇಲಾಖೆ ಅಲ್ಲಿ ಇರುವ ಕರಡಿಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸಿ ಹಲ್ಲೆಗೋಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅರಣ್ಯ ಇಲಾಖೆಗೆ ಆಗ್ರಹಿಸಿದರು.

promotions

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ನೂರಅಹ್ಮದ, ಲಕ್ಷೆö್ಮÃಶ್ವರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಂತೋಷಿ ಮಾತಾ ಬಡಿಗೇರ ತಾಲೂಕಾ ಉಸ್ತುವಾರಿ ಅಧ್ಯಕ್ಷ ಬಸವರಾಜ ವಾಲೀಕಾರ ಹಾನಗಲ್ಲ ತಾಲೂಕಾ ಅಧ್ಯಕ್ಷ ನಾಗರಾಜ ಮಲ್ಲಮ್ಮನವರ ತಾಲೂಕಾ ಸಂಚಾಲಕ ರಾಜು ದೊಡ್ಡಮನಿ, ಮಾರುತಿ ನೇಕಾರ, ಗಣಪತಿ ಕಲಗುದರಿ, ರಾಮು ಗೌಳಿ, ಮಂಜುನಾಥಗೌಡ ಪಾಟೀಲ, ಮಂಜುನಾಥ ಚನ್ನಾಪೂರ, ಗಂಗೂ ಜೋರೆ, ಬಾಬು ಎಡಗೆ ಸೇರಿದಂತೆ ಮುಂತಾದವರು ಹಾಜರಿದ್ದರು.

promotions

Read More Articles