ಮಳೆರಾಯನ ಹೊಡೆತಕ್ಕೆ ಗಗನಕ್ಕೇರಿದ ಈರುಳ್ಳಿ ಬೆಲೆ

ಬೆಳಗಾವಿ: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗ ಜನಜೀವನ ಅಸ್ತವ್ಯಸ್ತವಾಗಿದ್ದಲ್ಲದೆ ರೈತರ ಬದುಕು ಹೈರಾಣಾಗಿದೆ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಮಳೆಯಿಂದಾಗಿ ಆತನ ಬದುಕು ಕಂಗಾಲಾಗಿದೆ. ವರುಣನ ಆರ್ಭಟಕ್ಕೆ ಜನರ ಬದುಕು ಮಾತ್ರವಲ್ಲ ಕೃಷಿ ಕ್ಷೇತ್ರವು ಕೂಡ ತತ್ತರಿಸಿದೆ. ರೈತ ಬೆಳೆದ ಬೆಳೆಯಲ್ಲ ನೀರುಪಾಲಾಗಿ ರೈತ ಗೊಳಾಡುತ್ತಿದ್ದರೆ ಇನ್ನೊಂದು ಕಡೆ ಗ್ರಾಹಕರಿಗೂ ಕೂಡ ಇದರ ಬಿಸಿ ಮುಟ್ಟಿದೆ.

promotions

ಹೌದು, ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದ್ದು ರೈತರು ಬೆಳೆದ ಈರುಳಿ ಬೆಳೆ ನಾಶವಾಗಿ ಉತ್ಪಾದನೆ ಸ್ಥಗಿತವಾಗಿದೆ. ಇದರ ಪರಿಣಾಮ ಸರಬರಾಜು ತೀರಾ ಕಡಿಮೆಯಾಗಿದ್ದು ಆದ್ದರಿಂದ ಒಂದು ವಾರದಿಂದ ಈರುಳಿ ಬೆಲೆ ಸತತ ಏರಿಕೆ ಕಂಡಿದೆ. ನಗರದಲ್ಲಿ ಕೆಜಿಗೆ 70 ರಿಂದ 75 ರೂ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ರೈತನ ಪಾಲಿಗೆ ಬಿಸಿ ತುಪ್ಪ ಬಾಯಲ್ಲಿರಿಸಿದ ಹಾಗಾಗಿದೆ. ಇನ್ನು ಗ್ರಾಹಕರ ಪಾಲಿಗೆ ಕೊಂಚ ನೋವುಂಟು ಮಾಡಿದೆ.

promotions

Read More Articles