ವಾಲ್ಮೀಕಿ ಸಮುದಾಯಕ್ಕೆ 7.5 ರಷ್ಟು ಮೀಸಲಾತಿಯನ್ನು ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿ: ವಾಲ್ಮೀಕಿ ಪರಿಶಿಷ್ಟ ಪಂಗಡ ಜನಾಂಗಕ್ಕೆ ಮಾತ್ರ 7.5 ರಷ್ಟು ಮೀಸಲಾತಿಯನ್ನು ನೀಡಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದಿಂದ ವಾಲ್ಮೀಕಿ ಸಮುದಾಯದ ಜನರಿಗೆ ಸರ್ಕಾರ ಕೊಡ ಮಾಡಿದಂತಹ ಯೋಜನೆಗಳ ಬಗ್ಗೆ ಈಗಲೂ ಅರಿವು ಇಲ್ಲದೆ ಅವರು ಕೂಲಿ ಕೆಲಸ ಹೂವು ಹಣ್ಣು ತರಕಾರಿ ಮಾರುವ ಕಾರ್ಯಗಳನ್ನು ಮಾಡಿಕೊಂಡು ಮುಖ್ಯವಾಹಿನಿಗೆ ಬಾರದೆ ಜೀವನ ಸಾಗಿಸುತ್ತಿದ್ದಾರೆ.

promotions

ಶತಶತಮಾನಗಳಿಂದಲೂ ವಾಲ್ಮೀಕಿ ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಅವಕಾಶ ವಂಚಿತರಾಗಿ ಶೈಕ್ಷಣಿಕ ಔದ್ಯೋಗಿಕ ಆರ್ಥಿಕವಾಗಿ ಹಿಂದುಳಿದ ಬೇಕಾಗಿತ್ತು ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವು ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಅದರಲ್ಲಿ ಸರ್ಕಾರ ಒದಗಿಸಿರುವ ಮೀಸಲಾತಿಯಲ್ಲಿ ಈಗಾಗಲೇ ಅನೇಕ ಸಮುದಾಯಗಳನ್ನು ಸೇರಿಸಿರುವುದರಿಂದ ವಾಲ್ಮೀಕಿಯ ಜನರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು. ವಾಲ್ಮೀಕಿ ಸಮುದಾಯದ ಎಳಿಗೆ ಇನ್ನು ವರೆಗು ಹೊಂದಿಲ್ಲ ಆದ್ದರಿಂದ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯಕ್ಕೆ 15.5% ನಿಗದಿಪಡಿಸುವಂತೆ ಸಮಸ್ತ ಕರ್ನಾಟಕ ರಾಜ್ಯದಲ್ಲಿರುವ ಜನರ ಪರವಾಗಿ ಒಕ್ಕೂಟದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಎಸ್. ಎಸ್. ಮೂಕನವರ ರಾಜ್ಯ ವಾಲ್ಮೀಕಿ ನೌಕರರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ. ಸಿದರಾಯಿ ಶೀಗಿಹಳ್ಳಿ, ಪ್ರಕಾಶ, ಅನಿಲ್ ನಾಯಿಕ್, ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

promotions

Read More Articles