ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ
- 15 Jan 2024 , 2:25 AM
- Mangaluru
- 96
ಮಂಗಳೂರು: ತುಳು ಚಿತ್ರನಟ ಹಾಗೂ ಕಾಂಗ್ರೇಸ್ ಕಾರ್ಯಕರ್ತ ಸುರೇಂದ್ರ ಬಂಟ್ವಾಳರನ್ನು ಇಂದು ಹಾಡುಹಗಲೇ ಬರ್ಬರವಾಗಿ ಹತ್ಯೆಗೈಯಲಾಗಿದೆ. ಬಸ್ತಿಪಡುವಿನ ಅವರ ಅಪಾರ್ಟಮೆಂಟ್‌ನಲ್ಲಿ ಸುರೇಂದ್ರ ಶವ ಪತ್ತೆಯಾಗಿದ್ದು ಸ್ಥಳಕ್ಕೆ ಆಗಮಿಸಿ ಪೋಲಿಸರು ತನಿಖೆ ನಡೆಸಿದ್ದಾರೆ. ಹಣಕಾಸು ವಿಚಾರದಲ್ಲಿ ಸ್ನೇಹಿತರೊಂದಿಗಿನ ಮನಸ್ತಾಪವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಹಿಂದೆ 2018ರಲ್ಲಿ ಬಿಜಿಪಿ ಕಾರ್ಯಕರ್ತರ ಮೇಲಿನ ದಾಳಿ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಅವರು ಜೈಲಿಗೂ ಹೊಗಿದ್ದರು. ಆದರೆ ಈ ಕೊಲೆಗೆ ಹಿಂದಿನ ತಲವಾರು ದ್ವೇಷವೋ ಅಥವಾ ಮತ್ತೆನಾದರು ಇದೆಯೋ ಎಲ್ಲವು ಪೋಲಿಸರ ತನಿಖೆಯ ನಂತರವೇ ಬಹಿರಂಗವಾಗಲಿದೆ.












