ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ತಾಲೂಕಿನ ಪಂತ ನಗರದ ಗಣಪತಿ ಗಲ್ಲಿಯ ಹಾಗೂ ಹೊನ್ನಿಹಾಳ ಗ್ರಾಮದ ವಿಠ್ಠಲ ನಗರ ಈ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ಧಿಯ ಸ್ಪರ್ಶವನ್ನೇ ಕಾಣದ ರಸ್ತೆಗಳಿಗೆ ನಲವತ್ತು ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಹಿರಿಯರ ಹಾಗೂ ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂ ಜಿ ಪಾಟೀಲ, ಸದಾಶಿವ ಹಿಟ್ಟಣಗಿ, ರಾಮಚಂದ್ರ ಚಡಿಚ್ಯಾಳ, ಮಹಾದೇವ ಕರಗಣ್ಣವರ, ಪಿಡಿಓ ಬಗಲಿ, ನೂರ್ ಅಹ್ಮದ್ ಮುಲ್ಲಾ, ಅಪ್ಜಲ್ ಜಮಾದಾರ, ಜಮೀಲ್, ಪ್ರೇಮ್ ಕೋಲಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

promotions

Read More Articles