ಸು:ಖ-ಶಾಂತಿ ಲಭಿಸಲು ಪ್ರತಿಯೊಬ್ಬರೂ ಮೌಢ್ಯತೆಯಿಂದ ಹೊರಬರಬೇಕು, ಕೃಷ್ಣಾಪುರ ಬಂಜಾರಗುರು ಪೀಠದ ಪಟ್ಟಾಧ್ಯಕ್ಷ ಕುಮಾರ ಮಹಾರಾಜರು

  • 15 Jan 2024 , 2:18 AM
  • Haveri
  • 147

ರಾಣೇಬೆನ್ನೂರ: ಸಮಾಜದಲ್ಲಿ ಸು:ಖ-ಶಾಂತಿ ಲಭಿಸಲು ಪ್ರತಿಯೊಬ್ಬರೂ ಮೌಢ್ಯತೆಯಿಂದ ಹೊರಬರಬೇಕು ಎಂದು ಕೃಷ್ಣಾಪುರ ಬಂಜಾರಗುರು ಪೀಠದ ಪಟ್ಟಾಧ್ಯಕ್ಷಕುಮಾರ ಮಹಾರಾಜರು ನುಡಿದರು. ತಾಲೂಕಿನ ಅಂಕಸಾಪುರ ತಾಂಡಾದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಯುವಪೀಳಿಗೆಯು ಮಾದಕ ವಸ್ತುಗಳ ಸೇವನೆ, ಕುಡಿತದಂತಹ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧದ ಸಂಗತಿಯಾಗಿದೆ. ಇದರಿಂದ ಹೊರಬಂದು ದಾರ್ಶನೀಕರ ಮೌಲ್ಯಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಕೈಗೊಳ್ಳಬೇಕು ಎಂದರು. ಸರ್ಕಾರವು ಸದಾಶಿವ ಆಯೋಗವನ್ನು ಜಾರಿತರಬೇಕು. ಅದರಲ್ಲೂ ಬೋವಿ, ಲಂಬಾಣಿ, ಕೊರಚ ಜನಾಂಗದವರನ್ನು ಮೀಸಲಾತಿಯಿಂದ ಕೈಬಿಡಬಾರದು. ರಾಜ್ಯ ಸರ್ಕಾರವು ಕೇಂದ್ರ ಶಿಫಾರಸ್ಸು ಮಾಡದೇ ಬಹಿರಂಗ ಚರ್ಚೆಗೆ ತರಬೇಕು. ಒಂದು ವೇಳೆ ಸರ್ಕಾರವು ಮೀಸಲಾತಿಯಿಂದ ಕೈಬಿಟ್ಟರೆ ವಿಧಾನಸೌಧದ ಎದುರು ಎಲ್ಲ ವರ್ಗದ ಜನಾಂಗದವರು ಹೋರಾಟ ಮಾಡಲಾಗುವುದು. ಗೋರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಇತ್ತೀಚಿನ ದಿನಗಳಲ್ಲಿ ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರ ಸಂಪೂರ್ಣ ನಿಷೇಧಕ್ಕೆ ಸರ್ಕಾರ ಕಠಿಣವಾದ ಕಾಯ್ದೆ ಜಾರಿ ತರಬೇಕು. ಪ್ರತೀ ತಾಲೂಕಿನಲ್ಲಿ ಗೋಶಾಲೆಯನ್ನು ತೆರೆದು ಅದಕ್ಕಾಗಿ ಸರ್ಕಾರವು ಅನುದಾನವನ್ನು ಮೀಸಲಿರಿಸಬೇಕು ಎಂದರು. ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ಸಮಾಜದ ಏಳಿಗೆಗೆ ಕಂಕಣ ಬದ್ಧರಾಗಿ ಇಡೀ ಸಮೂಹವನ್ನು ಒಗ್ಗೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ತಪಸ್ವಿಗಳಾದ ಕುಮಾರ ಮಹಾರಾಜರಂಥವರು ನಮ್ಮ ಸಮಾಜಕ್ಕೆ ಗುರುಗಳಾಗಿ ಸಿಕ್ಕಿದ್ದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯ. ಮಹಾನ್ ತಪಸ್ವಿಗಳಾದ ಅವರುಗಳು ಅನ್ನ, ನೀರು, ಗಾಳಿ, ಬೆಳಕು ಸೇವಿಸದೇ 64 ದಿನಗಳ ಕಾಲ ಉಪವಾಸ ನಿರಶನದೊಂದಿಗೆ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಅವರ ಆಶೀರ್ವಾದದೊಂದಿಗೆ ಸಲಹೆ ಸೂಚನೆ ಪಡೆದುಕೊಂಡು ಎಲ್ಲ ಲಂಬಾಣಿ ಸಮಾಜದವರು ಮುನ್ನಡೆಯೋಣ ಎಂದರು ಈ ಸಂಧರ್ಭದಲ್ಲಿ ಬೀರಪ್ಪ ಲಮಾಣಿ, ಸೋಮಣ್ಣ ಲಮಾಣಿ, ಶಂಕರ ಲಮಾಣಿ, ಚಿದಾನಂದ, ವಿಜಯ ಪಟ್ಟಣಶೆಟ್ಟಿ, ಶಿವಣ್ಣ ಲಮಾಣಿ, ವೀರೇಶಕಾರ ಬಾರಿ, ಪಾಪಣ್ಣ ಲಮಾಣಿ, ರಾಜು ನಾಯಕ, ನಿಂಗಪ್ಪ ಲಮಾಣಿ, ಪೀರಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ, ಪ್ರಕಾಶಡಾವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

promotions

promotions

Read More Articles