ಸಂತ್ರಸ್ತರಿಗೆ ಮುಖ್ಯಮಂತ್ರಿಗಳ ವಿಪತ್ತು ನಿಧಿಯಿಂದ ಪರಿಹಾರ ಬಿಡುಗಡೆಗೆ ಆಗ್ರಹ
- 15 Jan 2024 , 2:06 AM
- Haveri
- 133
ಬ್ಯಾಡಗಿ: ತಾಲೂಕಿನಾದ್ಯಂತ ತೀವ್ರ ಮಳೆಯಿಂದ ಮನೆ ಕುಸಿತ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳ ವಿಪತ್ತು ನಿಧಿಯಿಂದ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಾಲೂಕು ಕಾಂಗ್ರೆಸ ಘಟಕದ ಕಾರ್ಯಕರ್ತರು ಬುಧವಾರ ಉಪತಹಸೀಲ್ದಾರ ಆರ.ವಿ.ಕಟ್ಟಿಮನಿ ಇವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕು ಕಾಂಗ್ರೆಸ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಯುವ ಘಟಕದ ಅಧ್ಯಕ್ಷ ಡಿ.ಬಿ.ಬುಡ್ಡನಗೌಡ್ರ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ಭಾಷಾಸಾಬ ದೊಡ್ಡಮನಿ, ದುರ್ಗೆಶ ಗೋಣೆಮ್ಮನವರ, ಹನುಮಂತಪ್ಪ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.












