ಮಕ್ಕಳ ಮಾತು ಮೀರಿ ಭಾವಿಗಿಳಿದ ತಂದೆ ಶವವಾಗಿ ಪತ್ತೆ
- 14 Jan 2024 , 9:41 PM
- Vijayapur
- 181
ವಿಜಯಪುರ: ಕುಡಿದ ಮತ್ತಿನಲ್ಲಿ ತನ್ನ ಮಕ್ಕಳ ಜೊತೆ ಈಜಲು ಹೋದ ತಂದೆ ಕೊನೆಗೆ ಶವವಾಗಿ ಪತ್ತೆಯಾದ ಘಟನೆ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ನಡೆದಿದೆ. ತುಕಾರಾಮ ವಿಠ್ಠಲ ಬರಡೋಲ ಎಂಬ ವ್ಯಕ್ತಿ ನಿನ್ನೆ ಸೋಮವಾರ ಮಧ್ಯಾಹ್ನದ ಸುಮಾರಿಗೆ ತನ್ನ ಮಕ್ಕಳೊಂದಿಗೆ ಈಜಲೆಂದು ಬಾವಿಗಿಳಿದ ಆದರೆ ಮಕ್ಕಳು ಬೇಡ ಅಪ್ಪ ನೀನು ಭಾವಿಯಲ್ಲಿ ಈಳಿಯಬೇಡ ಎಂದು ಹೇಳಿದರು ನಶೆಯ ಮತ್ತಿನಲ್ಲಿದ್ದ ತಂದೆ ಮಕ್ಕಳ ಮಾತನ್ನು ನಿರಾಕರಿಸಿ ಬಾವಿಗಿಳಿದು ಕೊನೆಗೆ ಶವವಾಗಿ ಬಿಟ್ಟಿದ್ದಾನೆ.

ಗ್ರಾಮಸ್ಥರೆಲ್ಲರೂ ಸೇರಿ 40 ಅಡಿ ಆಳದ ಬಾವಿಯಿಂದ ಸತತ ಹತ್ತು ಗಂಟೆಗಳ ಕಾಲ ನೀರನ್ನು ಹೊರಹಾಕಿ ಕಾರ್ಯಾಚರಣೆಯ ಮೂಲಕ ಕೊನೆಗೆ ಪ್ರಾರ್ಥಿವ ಶರೀರವನ್ನು ಹೊರತೆಗೆದರು.

ಅಷ್ಟರಲ್ಲಿ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತು. ನಶೆಯ ಮತ್ತಿನಲ್ಲಿ ಮಕ್ಕಳ ಮಾತು ಕೂಡ ಕೇಳ ಬರ್ಲಿಲ್ಲ ಈ ತಂದೆಗೆ ಕೊನೆಗೆ ಜವರಾಯನ ಪಾಲಾದನು.










