ಸಾರ್ವಜನಿಕರು ಮತ್ತು ಸಾರಿಗೆ ನೌಕರರು ಪರಸ್ಪರ ಹೊಂದಾಣಿಕೆ ಮೂಲಕ ಲಾಭ ಸಾಧ್ಯ: ಲಕ್ಷ್ಮಣ ಸವದಿ
- 14 Jan 2024 , 10:41 PM
- Belagavi
- 180
ಸವದತ್ತಿ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಯವರು ಸವದತ್ತಿಯ ಶಿಥಿಲಾವಸ್ಥೆಯ ಹಳೆಯ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಕಾಮಗಾರಿ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವವೇ ಕರೊನಾದಿಂದ ಬೆಂದು ಬಸವಳಿದಿದೆ, ಆರ್ಥಿಕ ವ್ಯವಸ್ಥೆಯು ಬಹಳ ಕೆಳಮಟ್ಟದಲ್ಲಿದೆ ಸಾರಿಗೆ ನೌಕರರಿಗೆ ಮುಂದಿನ ಜನೇವರಿ ವರೆಗೂ ಸಂಬಳ ನೀಡುವ ಮನವಿಯನ್ನು ಸರಕಾರಕ್ಕೆ ಮಾಡಿದ್ದೇನೆ.

ಸಾರಿಗೆ ಇಲಾಖೆಯ 4 ನಿಗಮಗಳು ಹಾನಿ ಅನುಭವಿಸುತ್ತಿವೆ ಸರಕಾರಗಳು ಸಾರಿಗೆ ಇಲಾಖೆಯ ನೀಡಬೇಕಾದ ಹಣವನ್ನು ನೀಡಿದ್ದರೆ ಇಂದು ಇಲಾಖೆಯು ಹಾನಿ ಅನುಭವಿಸುತ್ತಿರಲಿಲ್ಲ ಮುಂದಿನ ದಿನದಲ್ಲಿ ಹಳೆಯ ಬಸ್ ಗಳನ್ನು ಗುಜರಿಗೆ ಹಾಕುವ ಬದಲು ನವೀಕರಿಸಲಾಗುವುದು ಎಂದರು ಹಾಗೂ ಬೆಂಗಳೂರಲ್ಲಿ ಪ್ರಾಯೋಗಿಕವಾಗಿ ವ್ಯವಸ್ಥೆ ನಿರ್ಮಿಸಿ ಯಶಸ್ಸು ಸಾಧಿಸಿದ್ದೇವೆ.


ಸಾರ್ವಜನಿಕರು ಮತ್ತು ಸಾರಿಗೆ ನೌಕರರು ಒಂದಾಗಿ ಪರಸ್ಪರ ಹೊಂದಾಣಿಕೆ ಮೂಲಕ ಲಾಭ ಸಾಧ್ಯ. ಹಳೇ ಬಸ್ ಗಳಲ್ಲಿ ಶೌಚಾಲಯ ನಿರ್ಮಿಸಿ ದೇವಸ್ಥಾನದ ಹತ್ತಿರ ವಿಶಿಷ್ಟ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮವನ್ನು ಸವದತ್ತಿಯಲ್ಲಿ ಬಸ್ ನಿಲ್ದಾಣ ಉದ್ಘಟನೆಗೆ ವಿಧಾನಸಭಾ ಉಪಸಭಾಪತಿ ಹಾಗೂ ಸವದತ್ತಿ ಶಾಸಕರ ಒತ್ತಾಯಕ್ಕೆ ಶೀಘ್ರವಾಗಿ ಮಾಡಬೇಕಾಯಿತು ಎಂದು ಲಕ್ಷ್ಮಣ ಸವದಿ ಹೇಳಿದರು.










