ಲಿಂಗಾಯತ ಪಂಚಮಶಾಲಿ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ನೀಡಬೇಕು, ಬಸವ ಮೃತ್ಯುಂಜಯ ಸ್ವಾಮೀಜಿ ಆಗ್ರಹ

ಬೆಳಗಾವಿ: ಲಿಂಗಾಯತ ಪಂಚಮಶಾಲಿ ಸಮಾಜಕ್ಕೆ ರಾಜ್ಯ ಸರ್ಕಾರದಿಂದ ಪ್ರವರ್ಗ-2ಎ ಹಾಗೂ ಕೇಂದ್ರದಿಂದ ಒಬಿಸಿ ಮೀಸಲಾತಿ ನೀಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿಯ ನೇತೃತ್ವದಲ್ಲಿ ಇಂದು ಸುವರ್ಣ ವಿಧಾನಸೌಧ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

promotions

ಲಿಂಗಾಯತ ಪಂಚಮಶಾಲಿ ಸಮಾಜಕ್ಕೆ ಮೀಸಲಾತಿ ಕುರಿತು ಸುಮಾರು ಎರಡು ದಶಕದಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಇನ್ನುವರೆಗೂ ನಮಗೆ ನ್ಯಾಯ ದೊರೆತಿಲ್ಲ ಸಿಎಂ ಯಡಿಯೂರಪ್ಪ ಅವರ ಮೇಲೆ ನಮ್ಮ‌ ಸಮುದಾಯದ ಋಣವಿದೆ. ನಮ್ಮ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಅಸಮಾಧಾನವಿದೆ. ಸಚಿವ ಸ್ಥಾನವನ್ನು ಮುಂದೆ ಯಾವಾಗಾದ್ರು ಕೊಡಲಿ.

promotions

ಆದ್ರೆ ನಮ್ಮ ಸಮುದಾಯದಕ್ಕೆ ತಕ್ಷಣವೇ ಮೀಸಲಾತಿ ನೀಡುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಓಬಿಸಿಗೆ ಸೇರಿಸುವಂತೆ ಒತ್ತಡ ಹಾಕಬೇಕು. ಇಂದು ಸಂಜೆಯೊಳಗಾಗಿ ಮೀಸಲಾತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಬೇಕು ಮಧ್ಯಾಹ್ನ ಮೂರು ಗಂಟೆ ಒಳಗಾಗಿ ಸಚಿವರಿಗೆ ನಮ್ಮ ಮನವಿ ಪತ್ರವನ್ನು ಅರ್ಪಿಸುತ್ತೇವೆ.

ಸರ್ಕಾರದ ಪ್ರತಿನಿಧಿಗಳು ನಮ್ಮ ಮನವಿ ಸ್ವೀಕರಿಸುತ್ತಾರೆ. ಸರ್ಕಾರದ ನಿರ್ಧಾರ ನೋಡಿಕೊಂಡು ಮುಂದಿನ ಹೋರಾಟದ ರೂಪರೇಷೆಗಳನ್ನು ರೂಪಿಸುವುದಾಗಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Read More Articles