ಗ್ರಾಮೀಣ ಜನರ ಬದುಕು ಜ್ಯೋತಿಯಂತೆ ಬೆಳಗಲಿ, ಸಚಿವೆ ಶಶಿಕಲಾ ಜೊಲ್ಲೆ
- 14 Jan 2024 , 11:56 PM
- Belagavi
- 112
ನಿಪ್ಪಾಣಿ: ತಾಲೂಕಿನ ಮಾಂಗೂರ ಗ್ರಾಮದಲ್ಲಿಂದು ಸುಮಾರು 12.56 ಲಕ್ಷ ರೂ.ವೆಚ್ಚದಲ್ಲಿ ಮಂಜೂರಾದ, ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಗ್ರಾಮೀಣ ಜನರ ಬದುಕು “ಜ್ಯೋತಿ”ಯಂತೆ ಬೆಳಗುವಂತೆ ಆಗಲಿ, ಗ್ರಾಮದ ಸುತ್ತಲಿನ ದುರಗೌಂಡ, ವಾಯುಜೀತ, ಬೆಬಡೆ ಮತ್ತು ಕಮತೆ ತೋಟದ ಭಾಗದ ಜನರಿಗೆ ಈ ಯೋಜನೆಯಿಂದ ಅನುಕೂಲಕರವಾಗಲಿದೆ. ಪ್ರತಿಯೊಂದು ಗ್ರಾಮಕ್ಕೂ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಶಿಕ್ಷಣ, ಗ್ರಾಮೀಣ ಭಾಗದ ಜನರ ಕೆಲಸ-ಕಾರ್ಯಗಳಿಗೆ ಈ ಯೋಜನೆಯಿಂದ ಪ್ರಯೋಜನಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಮಲ್ಲಪ್ಪ ಚೌಗುಲೆ, ಭರತ ಪಾಟೀಲ, ಬಾಬು ಮುಲ್ಲಾ, ಸಂದೀಪ ಪಾಟೀಲ, ಪ್ರದೀಪ ಚೌಗಲೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.












