ಕೋರೊನಾ ವಾರಿಯರ್ಸಗೆ ಸನ್ಮಾನ

ಬೆಳಗಾವಿ: ಕೋರೊನಾ ವಿರದ್ದ ಸತತವಾಗಿ ಹೋರಾಡಿದ ಪೋಲಿಸರಿಗೆ ಹಿರೇಬಾಗೇವಾಡಿಯ ಪೋಲಿಸ ಠಾಣೆ ಆವರಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಿರೆಬಾಗೇವಾಡಿಯಲ್ಲಿ ಲಾಕ್ ಡೌನ್ ಜಾರಿಯಾದಾಗಿನಿಂದ ನಿರಂತರವಾಗಿ ಸತತ 24 ಗಂಟೆಗಳ ಕಾಲ ಹಗಲಿರುಳೆನ್ನದೆ ಹೋರಾಡಿದ ಪೋಲಿಸರಿಗೆ ಜಾಲಿ ಕರಿಯಮ್ಮ ದೇವಿ ಆರಾಧಕರಾದ ಉಳವಪ್ಪಜ್ಜನವರು ಸನ್ಮಾನಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೋಲಿಸರ ಕಾರ್ಯ ಅವಿಸ್ಮರಣೀಯವಾದ್ದದ್ದು ಜಿಲ್ಲೆಯಲ್ಲಿ ಕೋರೊನಾ ಹಾಟ್ ಸ್ಪಾಟ್ ಎಂದೇ ಹೆಸರಾಗಿರುವ ಹಿರೇಬಾಗೇವಾಡಿ ಗ್ರಾಮದ ಜನರಲ್ಲಿ ಆತಂಕದ ವಾತವರಣ ಮನೆ ಮಾಡಿತ್ತು ಆದರೆ ಈಗ ಯಾವುದೇ ಕೋರೊನಾ ಕೇಸ್ ಪತ್ತೆಯಾಗಿಲ್ಲಾ ಇದನ್ನು ತಡೆಯುವುದಕ್ಕಾಗಿ ಪೋಲಿಸರು, ವೈದ್ಯರು, ತುಂಬಾ ಹೋರಾಡಿದ್ದಾರೆ ಎಂದು ಉಳವಪ್ಪಜ್ಜನವರು ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಆನಂದ ಅಂಬಿಗೇರ ಗ್ರಾಮದಲ್ಲಿ ಕಟ್ಟುನಿಟ್ಟಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗ್ರಾಮಸ್ಥರು ಕೂಡ ಉತ್ತಮ ರೀತಿಯಿಂದ ಸಹಕರಿಸಿದ್ದಕ್ಕಾಗಿ ಗ್ರಾಮದಲ್ಲಿ ಕೋರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಸಾಧ್ಯವಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ತೋಂಟದಾರ್ಯ ಮಠದ ಶಿವಮೂರ್ತಿ ಸ್ವಾಮಿಗಳು, ಎ.ಎಚ್. ಪಠಾಣ ಸೇರಿದಂತೆ ಪೋಲಿಸ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

promotions

Read More Articles