ಬಿಡಿಸಿಸಿ ಬ್ಯಾಂಕ್ ಮೂರು ಕ್ಷೇತ್ರದಲ್ಲಿ ನಾಮಕಾ ವಾಸ್ತೆಗೆ ಮಾತ್ರ ಚುನಾವಣೆ : ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

ಬೆಳಗಾವಿ: ಜಿಲ್ಲೆಯ ಜನತೆಯಲ್ಲಿ ಕೂತುಹಲ ಮೂಡಿಸಿದ್ದ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ 16 ಜನ ನಿರ್ದೇಶಕರಲ್ಲಿ 13 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂರು ಕ್ಷೇತ್ರಗಳಲ್ಲಿ ನಾಮಕಾವಾಸ್ತೆ ಚುನಾವಣೆ ನಡೆಸಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

promotions

ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಒಂದು ವಾರದಿಂದ ಬಿಡಿಸಿಸಿ ಬ್ಯಾಂಕ್ ಚುನಾವಣೆ ಅವಿರೋಧವಾಗಬೇಕು. ರೈತರ ಹಿತ ದೃಷ್ಟಿಯಿಂದ ನಡೆಯಬಾರದು. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ಅವಿರೋಧವಾಗಿರಬೇಕೆಂದು ನಮ್ಮ ವರಿಷ್ಠರು ಕಿವಿ ಮಾತು ಹೇಳಿದ್ದರು.

promotions

ಕತ್ತಿ, ಜಾರಕಿಹೊಳಿ ಕುಟುಂಬ ಸೇರಿದಂತೆ ‌ಆನಂದ ಮಾಮನಿ, ಮಹಾಂತೇಶ ಕವಟಗಿಮಠ, ಜೊಲ್ಲೆ ಕುಟುಂಬದವರ ಜೊತೆ ಚರ್ಚೆ ನಡೆಸಿ 16 ಕ್ಷೇತ್ರದಲ್ಲಿ 13 ಅವಿರೋಧ ಆಯ್ಕೆಯಾಗಿವೆ. ಆದರೆ ಸಮಯದ ಅಭಾವ ಇರುವುದರಿಂದ ಮೂರು ಕ್ಷೇತ್ರದಲ್ಲಿ ನಾಮಕಾ ವಾಸ್ತೆಗೆ ಮಾತ್ರ ಚುನಾವಣೆ ನಡೆಯಲಿದೆ ಎಂದರು.

ಕುರಿ ಉಣ್ಣೆ ಸಹಕಾರಿ ಸಂಘ, ಖಾನಾಪುರ ಹಾಗೂ ರಾಮದುರ್ಗದಲ್ಲಿ ನಾಮಕೆವಾಸ್ತೆ ಚುನಾವಣೆ ನಡೆಸಲಾಗುವುದು. 16 ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದವು, ಸಮಯದ ಅಭಾವದಿಂದ ಅಭ್ಯರ್ಥಿಗಳು ಬೇರೆ ಬೇರೆ ಸ್ಥಳದಲ್ಲಿರುವುದರಿಂದ ಅವರು ಬರಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೂ ಮಹಾರಾಷ್ಟ್ರದವರು ಕರಾಳ ದಿನ ಆಚರಣೆ ಮಾಡುವ ಹೇಳಿಕೆ ನೀಡಿರುವ ಕುರಿತು ವಿಚಾರಿಸಿದಾಗ

ಮಹಾರಾಷ್ಟ್ರದ ಬಗ್ಗೆ ಟಿಕೆ ಟಿಪ್ಪಣೆ ಇಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾರೇ ಕೂಗಾಡಲಿ, ಯಾರೆ ಹಾರಾಡಲಿ ಸೂರ್ಯ, ಚಂದ್ರರಿರುವರೆಗೂ ಬೆಳಗಾವಿ ಕರ್ನಾಟಕದ್ದೆನೆ. ಮಹಾರಾಷ್ಟ್ರದವರು ಏನೇ ಹೇಳಿದರು‌. ಅದು ತೀಟೆ ತಿರಿಸಿಕೊಳ್ಳುವುದು.

ಕರ್ನಾಟಕದ ಅನ್ನ, ನೀರು ಕುಡಿಯುತ್ತಾರೆ. ನಾಡದೋಹ್ರ ಮಾಡುವುದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ಕುಳಿತು ಹೇಳಿಕೆ ಕೊಡುವ ಬದಲು ಕರ್ನಾಟಕದಲ್ಲಿ ಬೆಳಗಾವಿಯಲ್ಲಿ ಬಂದು ಹೇಳಲಿ. ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

Read More Articles