ತಂಗಿಯಿಂದ ಅಣ್ಣನ ಕೋಲೆ
- 15 Jan 2024 , 12:24 AM
- Uttarpradesh
- 167
ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ದೀಪಕ್ ರಜಪೂತ್ ಎಂಬಾತ ಮೃತ ಯುವಕ ತನ್ನ ತಂಗಿಯ ಕೈಯಿಂದಲೇ ಹತನಾಗಿದ್ದಾನೆ. ಯುವತಿ ಒನಕೆಯಿಂದ ಹೊಡೆದು ಅಣ್ಣನ್ನು ಹತ್ಯೆ ಮಾಡಿದ್ದಾಳೆ. ಸೀದಾ ಪೊಲೀಸ್ ಠಾಣೆಗೆ ಹೋಗಿ, ನಾನು ನನ್ನ ಸೋದರನನ್ನು ಕೊಂದು ಹಾಕಿದೆ. ಮನೆಯಲ್ಲಿ ಅಪ್ಪ-ಅಮ್ಮ ಇಲ್ಲದ ಹೊತ್ತಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ. ಅವನ ಕಿರುಕುಳ ತಡೆಯಲಾಗದೆ ಹತ್ಯೆ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನು ಕೇಳಿದ ಪೋಲಿಸರಿಗು ಶಾಕ್ ಆಗಿತ್ತು. ಈ ಪ್ರಕರಣ ವನ್ನು ದಾಖಲಿಸಿಕೊಂಡು ಯುವತಿ ಹಾಗೂ ಪಾಲಕರನ್ನು ವಿಚಾರಣೆ ಮಾಡಲಾಗುತ್ತಿದೆ ಯುವತಿ ಮತ್ತು ಆಕೆಯ ಪಾಲಕರು ನೀಡುತ್ತಿರುವ ಹೇಳಿಕೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಕೊಲೆ ಹಿಂದಿನ ಸತ್ಯವನ್ನು ಶೀಘ್ರವೇ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.











