ಸಾಲ ಬಾಧೆ ತಾಳಲಾರದೆ ರೈತನೊಬ್ಬ ನೇಣಿಗೆ ಶರಣು

  • 15 Jan 2024 , 1:37 AM
  • Haveri
  • 112

ಬ್ಯಾಡಗಿ: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಭಾನುವಾರ ಜರುಗಿದೆ. ಮೃತ ರೈತ ವೀರನಗೌಡ್ರ ನಾಗಪ್ಪ ಕೋಟಿಹಾಳ (37) ಎನ್ನಲಾಗಿದೆ. ಇತನಿಗೆ 2 ಎಕರೆ ಜಮೀನಿದ್ದು, ಎರಡ್ಮೂರು ವರ್ಷಗಳಿಂದ ಬೆಳೆ ಸಮರ್ಪಕವಾಗಿ ಬೆಳೆದಿರಲಿಲ್ಲ. ಕೆವಿಜಿ ಬ್ಯಾಂಕನಲ್ಲಿ 1 ಲ.ರೂ ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ 1.5 ಲ.ರೂ. ಸಾಲ ಇರುವುದಾಗಿ ತಿಳಿದು ಬಂದಿದೆ. ಸಾಲದ ಸುಳಿಯಲ್ಲಿ ಸಿಲುಕಿದ ಇತನು ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ದೂರಿನಲ್ಲಿದೆ. ಬ್ಯಾಡಗಿ ಪೋಲಿಸ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

promotions

promotions

Read More Articles