ಕನ್ನಡ ಭಾಷೆ ತೋರಿಕೆಯಾಗಬಾರದು ಹೆಚ್ಚು ಆಚರಣೆಗೆ ಬರಲಿ ಹನುಮಂತಪ್ಪ ಗುಳೇದ
- 31 Dec 2023 , 3:48 PM
- Haveri
- 153
ಶಿಗ್ಗಾಂವಿ: ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ತೋರಿಕೆಗೆ ಹೇಳುವ ನಾವು, ಅನ್ಯ ಭಾಷೆಗಳತ್ತ ಆಕರ್ಷಿತರಾಗುತ್ತಿರುವುದು ಸರಿ ಅಲ್ಲ ಎಂದು ವನಹಳ್ಳಿ ಗ್ರಾ.ಪಂ. ಮಾಜಿ ಸದಸ್ಯ ಹನುಮಂತಪ್ಪ ಗುಳೇದ ಹೇಳಿದರು. ತಾಲೂಕಿನ ಗೊಟಗೋಡಿಯ ಉತ್ಸವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡದಲ್ಲಿ ಕಲಿತರೆ ಸಮಾಜದಲ್ಲಿ ಉನ್ನತ ಸ್ಥಾನ ಲಭಿಸುವುದಿಲ್ಲ ಎಂಬ ಭಾವ ನಮ್ಮಲ್ಲಿ ಮನೆ ಮಾಡಿದೆ. ಇದು ತಪ್ಪು ಕಲ್ಪನೆಯಾಗಿದೆ ನಮ್ಮ ಮಾತೃಭಾಷೆ ಜತೆ ಅನ್ಯ ಭಾಷೆಗಳನ್ನು ಕಲಿಯಬಾರದು ಎಂದು ಯಾರೂ ಹೇಳಿಲ್ಲ. ಹೀಗಿದ್ದು ಕನ್ನಡಿಗರು ಕನ್ನಡಕ್ಕೆ ಆದ್ಯತೆ ನೀಡದಿರುವುದು ಬೇಸರದ ಸಂಗತಿ ಎಂದರು. ಮುಖ್ಯ ಶಿಕ್ಷಕ ಸಂತೋಷ ಕಂಟೆನವರ ಮಾತನಾಡಿ, ರಾಷ್ಟಿçÃಯ ಹಾಗೂ ರಾಜ್ಯ ಹಬ್ಬಗಳು ಸಮಾಜಕ್ಕೆ ಒಳ್ಳೇಯ ಸಂದೇಶ ನೀಡುತ್ತವೆ. ಎಲ್ಲರಲ್ಲೂ ನಮ್ಮ ದೇಶ, ನಮ್ಮ ರಾಜ್ಯ ಎಂಬುದರ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ತಿಳಿಸಿದರು. ಉತ್ಸವ ರಾಕ್ ಗಾರ್ಡನ್ ಮ್ಯಾನೇಜರ್ ಬಿ.ಎಫ್.ಮಡಿವಾಳರ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ಅಮೃತಾ ಬಡ್ಡಿ, ಕಾವೇರಿ ಸವಣೂರ, ಶೃತಿ ಪೋಲಿಸ್‌ಗೌಡರ, ಉಮಾ ಪಾಟೀಲ ಹಾಗೂ ಆನಂದಗೌಡ ಪಾಟೀಲ ಭಾಗವಹಿಸಿದ್ದರು. ಮಹೇಶ ವಡ್ಡರ ಸ್ವಾಗತಿಸಿದರು. ವಿದ್ಯಾರಾಣಿ ಗಾಣಿಗೇರ ವಂದಿಸಿದರು.












