ಮಹಾತ್ಮರ ನಡೆನುಡಿ ಆದರ್ಶಗಳನ್ನು ಪಾಲಿಸಲು ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಕರೆ

  • 14 Jan 2024 , 10:01 PM
  • Haveri
  • 139

ಬ್ಯಾಡಗಿ: ಮಹಾತ್ಮರ ನಡೆನುಡಿ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಮಹಾತ್ಮರ ಆಚರಣೆಗೆ ಮಹತ್ವ ಬರಲಿದೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುoತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಳಿಕ ಮಾತನಾಡಿದ ಅವರು, ಇಲ್ಲಿನ ಬಸ್ಸ ನಿಲ್ದಾಣ ಪಕ್ಕದಲ್ಲಿ 2 ಕೋ.ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿದೆ. ಕಟ್ಟಡಕ್ಕೆ ಸೂಕ್ತ ಮಾರ್ಗ ಹಾಗೂ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸುವ ಬೇಡಿಕೆಗೆ ತಾವು ಸ್ಪಂದಿಸುವೆ ಸಂತರ ಹಾಗೂ ಎಂದು ತಿಳಿಸಿದರು. ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಹೊನ್ನೂರಪ್ಪ ಕಾಡಸಾಲಿ ಮಾತನಾಡಿ, ಸರ್ಕಾರ ವಾಲ್ಮೀಕಿ ಸಮಾಜಕ್ಕೆ ಶೇ.7.5 ಮೀಸಲಾತಿಕಲ್ಪಿಸುವಂತೆ ಸಮಾಜ ಬಾಂಧವರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಸ್ಪಂದಿಸುವ ಭರವಸೆ ನೀಡಿದ್ದು, ಕೂಡಲೇ ನಮಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.ಸಮಾಜ ಬಾಂಧವರು ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು.

promotions

ವಾಲ್ಮೀಕಿಭವನ ನಿರ್ಮಿಸಲುಗ್ರಾಮೀಣ ಪ್ರದೇಶದಲ್ಲಿ ಸ್ಥಳ ಕಲ್ಪಿಸುವಂತೆ ಸ್ಥಳೀಯ ಶಾಸಕರು ಅಧಿಕಾರಿಗಳಿಗೆ ನಿರ್ಧೆಶಿಸುವಂತೆ ಮನವಿ ಮಾಡಿದರು. ಈ ವೇಳೆ ತಹಸೀಲ್ದಾರ ರವಿ ಕೊರವರ, ಬಿಜೆಪಿ ಎಸ್‌ಟಿ ಮೋರ್ಚಾಜಿಲ್ಲಾಧ್ಯಕ್ಷ ಶಿವಾನಂದ ಯಮನಕ್ಕನವರ, ಪುರಸಭೆ ಸದಸ್ಯರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಮ್ಯಾಗೇರಿ, ಶಿವರಾಜ ಅಂಗಡಿ, ಪಕ್ಕೀರಮ್ಮ ಚಲವಾದಿ, ಮಲ್ಲೇಶಪ್ಪ ಒಳಗುಂದಿ, ಬಸವರಾಜ ಭೀಮಾನಾಯಕ, ಸಮಾಜಕಲ್ಯಾಣ ಇಲಾಖೆ ನಿರ್ಧೆಶಕ ಪುಂಡಲೀಕ ಮಾನನವರ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಹನುಮಂತಪ್ಪ ಲಮಾಣಿ, ಜೀವರಾಜಛತ್ರದ, ದುಗ್ಗಪ್ಪ ಉಂಡ್ರಾಳ, ಈರಪ್ಪ ತೆರೇದಹಳ್ಳಿ ಇತರಿದ್ದರು.

promotions

Read More Articles