ದ್ವೇಷದ ಬೆಂಕಿ ಆರಿದೆ ಎನ್ನುವಷ್ಟರಲ್ಲಿ ಭೀಮಾತೀರ ಮತ್ತೊಂದು ಘಟನೆಗೆ ಸಾಕ್ಷಿ

ವಿಜಯಪುರ: ಬಹುದಿನಗಳಿಂದ ಹೊತ್ತಿ ಉರಿಯುತ್ತಿರುವ ದ್ವೇಷದ ಬೆಂಕಿ ಸ್ವಲ್ಪ ದಿನದಿಂದ ತಣ್ಣಗಾಗಿದೆ ಅನ್ನುವಷ್ಟರಲ್ಲಿ ಭೀಮಾತೀರ ಮತ್ತೊಂದು ಘಟನೆಗೆ ಸಾಕ್ಷಿಯಾಗಿದೆ. ಜಿಲ್ಲೆಯ ಭೈರವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಹಾದೇವ ಸಾಹುಕಾರ್ ಬೈರಗೊಂಡ ಮತ್ತು ಬಾಬುರಾವ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ. ಜಿಲ್ಲೆಯ ಸಮೀಪದ ಆರಕೇರಿ ತಾಂಡಾದ ಬಳಿ ಈ ಘಟನೆ ನಡೆದಿದ್ದು ಮಾಹಾದೇವ ಸಾಹುಕಾರ್ ಭೈರಗೊಂಡ ಅವರಿಗೆ ಎರಡು ಗುಂಡು ತಾಗಿದೆ ಮತ್ತು ಬಾಬುರಾವ ಅವರಿಗೆ ಗಂಭೀರ ಗಾಯಗಳಾಗಿವೆ.

promotions
logintomyvoice

ಆರಕೇರಿ ತಾಂಡಾದ ಬಳಿ ಕಾರು ಸಂಚರಿಸುತ್ತಿರಬೇಕಾದರೆ ಕಾರಿಗೆ ಟಿಪ್ಪರ್ ಡಿಕ್ಕಿ ಬಳಿಕ ಅಪರಚಿತರಿಂದ ಅದೇ ಸ್ಥಳದಲ್ಲಿ ಏಕಾಏಕಿ ಮಾಹಾದೇವ ಸಾಹುಕಾರ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

promotions

Read More Articles