ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪೈನಲ್ ಯಾರು ಯಾರಿಗೇ ಟಿಕೆಟ್ ?
- 17 Dec 2023 , 11:16 PM
- Bengaluru
- 134
ಬೆಳಗಾವಿಯಲ್ಲಿ ಪ್ರಭಾಕರ್ ಕೋರೆ ಮತ್ತು ರಮೇಶ ಕತ್ತಿಯವರ ನಡುವೆ ಟಿಕೆಟ್ ಗಾಗಿ ಭಾರಿ ಪೈಪೋಟಿ ನಡೆದಿತ್ತು ಉಮೇಶ ಕತ್ತ ಸಹೋದರ ರಮೇಶ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಕುಳತ್ತಿದ್ದರು ಇದರಿಂದ ಬಂಡಾಯದ ಬಿಸಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಟ್ಟಿತು ಕೋರೊನಾದ ನಡುವೆಯು ಬೆಳಗಾವಿ ರಾಜಕಾರಣ ಬಿಸಿ ಬಿಜೆಪಿಯಲ್ಲಿ ತಟ್ಟಿದೆ.
ಇನ್ನೂ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಸಭೆ ತೀರ್ಮಾನ ಮಾಡಿದ್ದು ಒಟ್ಟಾರೆ ರಾಜ್ಯಸಭೆ ಗೆ ಬಿಜೆಪಿಯಿಂದ ಮೂವರ ಹೆಸರನ್ನು ಕಳುಹಿಸಲಾಗಿದೆ . ಆದರೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ . ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ಇವರ ಹೆಸರುಗಳ ಹೊರತಾಗಿ ಆರ್ಥಿಕ ತಜ್ಞ ಕಾಮತ್ , ಇನ್ಫೋಸಿಸ್ ನ ಸುಧಾಮೂರ್ತಿ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿ ಯಲ್ಲಿವೆ. ಹೀಗಾಗಿ ಅಂತಿಮವಾಗಿ ರಾಜ್ಯ ಬಿಜೆಪಿ ಕಳುಹಿಸಿದ ಹೆಸರು ಬದಲು ಮುಂಚೂಣಿಯಲ್ಲಿರುವ ಈ ವ್ಯಕ್ತಿಗಳ ಹೆಸರು ಪ್ರಕಟ ಆದರೂ ಆಶ್ಚರ್ಯ ಪಡಬೇಕಿಲ್ಲ ಯಾರು ಯಾರಿಗೆ ಟಿಕೆಟ್ ಸಿಗುತ್ತದೆ ಯಂದು ಕಾದು ನೋಡ ಬೇಕಾಗಿದೆ.











