ಏಕಲವ್ಯ ಪ್ರಶಸ್ತಿ; ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ವಾಲ ಟ್ವೀಟ್

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ನೀಡುವ ಏಕಲವ್ಯ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗ ಕೆ.ಎಲ್ರಾಹುಲ್, ಮಯಾಂಕ್ಅಗರ್ವಾಲ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಫವಾದ್ಮಿರ್ಜಾ, ಈಜು ಪಟುಗಳಾದ ಖುಷಿದಿನೇಶ್, ಶ್ರೀಹರಿನಟರಾಜ್, ಅಥ್ಲೀಟ್ ಜಿ.ವಿಜಯಕುಮಾರಿ ಸೇರಿದಂತೆ 31 ಮಂದಿ ಸಾಧಕರು ಏಕಲವ್ಯ ಕ್ರೀಡಾ ಗೌರವಕ್ಕೆ ಭಾಜನರಾಗಿದ್ದಾರೆ. ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕರ್ನಾಟಕ ಸರ್ಕಾರಕ್ಕೆ ಮಯಾಂಕ್ ಅಗರ್ವಾಲ್ ಧನ್ಯವಾದಗಳನ್ನು ತಿಳಿಸಿದ್ದಾರೆ.

promotions
logintomyvoice

ನನ್ನ ಸಾಧನೆಯನ್ನ ಗುರುತಿಸಿ ನನಗೆ ಏಕಲವ್ಯ ಪ್ರಶಸ್ತಿ ನೀಡಿದ ಕರ್ನಾಟಕ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಅದ್ಭುತ ರಾಜ್ಯವನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ಸಂಗತಿ. ಈ ಪ್ರಶಸ್ತಿಗೆ ಕಾರಣರಾದ ಎಲ್ಲಾ ತರಬೇತುದಾರರು, ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.ಎಂದು ಮಾಯಾಂಕ್ ಅಗರ್ವಾಲ   ಟ್ವೀಟ್ ಮಾಡಿದ್ದಾರೆ.

promotions
logintomyvoice

ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು ಎಂದು ಕೆ.ಎಲ್.ರಾಹುಲ್ ರಾಜ್ಯ ಸರ್ಕಾರಕ್ಕೆ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.

Read More Articles