ಬಿಜೆಪಿ ಮುಖಂಡರಿಗೆ ಸೆಡ್ಡು ಹೊಡೆದ್ರು, ಡಾ.ಅಂಜಲಿ ನಿಂಬಾಳ್ಕರ
- 15 Jan 2024 , 3:54 AM
- Belagavi
- 109
ಬೆಳಗಾವಿ: ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಗೆ ನ.6 ರಂದು ಮತದಾನ ನಡೆಯಲಿದ್ದು ಚುನಾವಣಾ ಕಣ ರಂಗೇರಿದೆ. ಮೊದಲ ಬಾರಿಗೆ ಖಾನಾಪುರ ಮತ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಸ್ಪರ್ಧೆಯಿಂದ ಮಹಿಳೆಯೊಬ್ಬರು ನಿರ್ದೇಶಕ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದರಿಂದ ಈ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ ಮುಖಂಡರಿಗೆ ಡಾ.ಅಂಜಲಿ ನಿಂಬಾಳ್ಕರ ಸೆಡ್ಡು ಹೊಡೆದಿದ್ದು ಮಾಜಿ ಎಂಇಎಸ್ ಶಾಸಕ ಅರವಿಂದ ಪಾಟೀಲ ಅವರನ್ನು ಗೆಲ್ಲಿಸಿಕೊಳ್ಳುವ ಜೊತೆಗೆ ಬಿಜೆಪಿಗೆ ಸೇರಿಸಿಕೊಳ್ಳುವ ಯೋಜನೆಯೂ ಬಿಜೆಪಿ ನಾಯಕರದಾಗಿದೆ.


ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ನಡುವೆ ತೀವ್ರ ಪೈಪೋಟಿ ನಡೆದಿದ್ದು. ಖಾನಾಪುರ ಸೇರಿ 3 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದು ಸಹಕಾರ ಕ್ಷೇತ್ರದ ಚುನಾವಣೆಯಾದರೂ ಪಕ್ಷಗಳ ನಾಯಕರು ನೇರವಾಗಿಯೇ ಪೈಪೋಟಿಗೆ ಇಳಿದಿದ್ದಾರೆ.










