ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ
- 15 Jan 2024 , 2:02 AM
- Belagavi
- 101
ಬೆಳಗಾವಿ: ನಗರದ ರೈಲ್ವೆ ನಿಲ್ದಾಣ ಎದುರಿಗಿನ ಬಸ್ ನಿಲ್ದಾಣ ಕಾಮಗಾರಿಗೆ ಇಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಭೂಮಿ ಪೂಜೆ ನೆರೆವೇರಿಸಿದರು. ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣದ ಎದುರಿನ (ಕಾರವಾರ ಗೋವಾ ಬಸ್ ಸ್ಟ್ಯಾಂಡ್) ಬಸ್ ನಿಲ್ದಾಣ ಕಾಮಗಾರಿ ಅಂದಾಜು 1.86 ಕೋಟಿ. ರೂ. ವೆಚ್ಚ ಇದಾಗಿದ್ದು, ಡ್ರೈನೇಜ್, ಪ್ಯಾಸಂಜರ್ ಕಾಯುವ ಪ್ರದೇಶ, ಟಿಕೆಟ್ ಕೌಂಟರ್, ಕಿಯೋಸ್ಕ್, ಕರ್ಷಕ ಫ್ಯಾಬ್ರಿಕ್ ವರ್ಕ್ಸ್, ಎಲೆಕ್ಟ್ರಿಕಲ್ ವರ್ಕ್ಸ್ ಸೇರಿದಂತೆ ಇತರೆ ಕೆಲಸಗಳು ಆದಷ್ಟು ಬೇಗ ಮುಗಿಯಬೇಕು ಎಂದು ಶಾಸಕ ಬೆನಕೆ ಅಧಿಕಾರಿಗಳಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಕಂಟೋನ್ಮೆoಟ್ ಸಿಇಒ ಬರ್ಚಸ್ವಾ, ಉಪಾಧ್ಯಕ್ಷೆ ನಿರಂಜನಾ ಅಸ್ಟೇಕರ್, ಬಿಜೆಪಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ, ಬೆಳಗಾವಿ ಉತ್ತರ ಮಂಡಲದ ಅಧ್ಯಕ್ಷ ಪಾಂಡುರoಗ ಧಾಮ್ನೆಕರ್, ಕಂಟೋನ್ಮೆoಟ್ ಮಂಡಳಿಯ ಚುನಾಯಿತ ಸದಸ್ಯ ಸಾಜೀದ್ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.











