ವಿದ್ಯುತ್ ಸಮಸ್ಯೆ, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ
- 15 Jan 2024 , 3:44 AM
- Haveri
- 155
ಶಿಗ್ಗಾವಿ: ಗಾಳಿಯು ಇಲ್ಲಾ, ಮಳೆಯು ಇಲ್ಲಾ ಆದರು ಕರೆಂಟು ಮಾತ್ರ ಹೋಗುತ್ತಿದೆ. ಹೆಸ್ಕಾಂ ಅಧಿಕಾರಿಳ ಸಮಯ ನಿಗಧಿಯಿಲ್ಲದೇ ಅನಿಯಮಿತ ವಿದ್ಯುತ್ತ ಕಣ್ಣಾಮುಚ್ಚಾಲೆಯ ಆಟಕ್ಕೆ ಜನರು ಹೈರಾಣು ಆಗಿದ್ದಾರೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರು ಬೇಸತಿದ್ದು ಬಂಕಾಪೂರ ಹೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತಿದ್ದಾರೆ.

ವಿದ್ಯುತ್ತ ಪೂರೈಸುವ ಪೀಡರ್‌ಗಳು, ಕಂಬಗಳ ದುರಸ್ತಿ, ಲೈನ್ ಟ್ರೀಪ್ ಸರ್ವೆ ಸಾಮಾನ್ಯವಾದರೂ, ಕಾರಣವಿಲ್ಲದೇ ರಾತ್ರಿ ಸಮಯದಲ್ಲೇ ವಿದ್ಯುತ್ತ ಕೈಕೊಟ್ಟು ಹೋಗಿ ಗ್ರಾಮೀಣ ಪ್ರದೇಶಗಳು ಕತ್ತಲಲ್ಲಿ ಕಾಲ ಹಾಕುವ ಪರಿಸ್ಥಿತಿ ಬಂದೊದಗಿದೆ. ಹಿಟ್ಟಿನಗಿರಣಿ, ಸಣ್ಣಪುಟ್ಟ ಅಂಗಡಿಕಾರರು, ವಿದ್ಯುತ್ತ ಬಳಸುವ ಅವಲಂಭೀತ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ತ ಸಿಗದೇ ಅಸ್ಥವ್ಯಸ್ತವಾಗಿ ಮಾಡುವ ಕೆಲಸಕ್ಕೂ ಅರ್ದಬರ್ದವಾಗಿ ವಿಘ್ನವಾಗುವ ಪ್ರಸಂಗಗಳು ಎದುರಾಗುತ್ತಿವೆ.

ತಂತಿಗಳು ಜೊತು ಬಿದ್ದು ಅನಾಹುತಕ್ಕೆ ಎಡೆ ಮಾಡುತ್ತಿರುವ ಪ್ರಸಂಗಗಳು ಎದುರಾಗುತ್ತಿದ್ದರು ವಿದ್ಯುತ್ತ ಪೂರೈಸುವ ಹೆಸ್ಕಾಂ ದುರಸ್ಥಿ ಕಾರ್ಯಕ್ಕೆ ಮುಂದಾಗಿಲ್ಲ. ಇದಾರಿಂದಾಗಿ ಗ್ರಾಮದ ಸುತ್ತ ಹಲವಾರು ಘಟನೆಗಳು ನೆಡೆದಿವೆ. ಅವಘಡ ಸಂಬವಿಸದಾಗ ಮಾತ್ರ ತನಿಖೆಗೆ ಹುಬ್ಬಳ್ಳಿ ವಿದ್ಯುತ್ತ ವಿತರಣಾ ವಿಭಾಗ ಸಂಬoಧಿತ ಅಧಿಕಾರಿಗಳು ನೆಪಕ್ಕೆ ಬಂದು ಪರಿಶೀಲಿಸಿ ತಾಂತ್ರಿಕ ಸುಳ್ಳು ವರಧಿ ಬರೆದು ಜಾರಿಕೊಳ್ಳುತ್ತಾರೆ.
ಪರಿಹಾರವನ್ನೂ ಕೊಡದೇ ಇಲಾಖೆ ಸತಾಯಿಸಿದೆ ಇಷ್ಟೆಲ್ಲಾ ಕಾರಣಗಳಿದ್ದರೂ ಲೈನ್ ದುರಸ್ಥಿ ಮಾಡದೇ, ಲೈನ್ ಅಸ್ಥವ್ಯಸ್ಥತೆ ನೆಪದಿಂದ ಪ್ರತಿದಿನ ಸಾಯಂಕಾಲದಲ್ಲಿ ಹತ್ತಾರು ಬಾರಿ ಲೋಡ್ ಶೆಡ್ಡಿಂಗ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ತರುವ ಬದಲು ಅಧಿಕಾರಿಗಳು ಸಮರ್ಪಕವಾಗಿ ದುರಸ್ಥಿ ಕೈಗೊಂಡು ಉತ್ತಮ ಗುಣಮಟ್ಟದ ವಿದ್ಯುತ್ತ ಪೂರೈಸವಂತಾಗಲಿ ಎಂಬುದು ಗ್ರಾಮೀಣ ಭಾಗದ ವಿದ್ಯುತ್ತ ಗ್ರಾಹಕರ ಅಭಿಲಾಸೆ ವ್ಯಕ್ತಪಡಿಸುತ್ತಾರೆ.
ಇವೆಲ್ಲ ಕಾರಣಗಳಿಂದ ಶಿಬ್ಬಂಧಿಗಳನ್ನು ವಿಚಾರಿಸಿದರೇ ಅನುಚ್ಚಿತವಾಗಿ ವರ್ತಿಸುವವರನ್ನು ಹಿರಿಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅಲ್ಲಿಯ ಸ್ಥಳೀಯರ ಆರೋಪವಾಗಿದೆ.










