ಟೆಕ್ಸಟೈಲ್ ಪಾರ್ಕಗೆ ರಾಜ್ಯ ಸರ್ಕಾರದಿಂದ ವಿಶೇಷ ಸಬ್ಸಿಡಿ; ಗೃಹಸಚಿವ ಬೊಮ್ಮಾಯಿ ಬರವಸೆ
- 12 Dec 2023 , 10:46 AM
- Haveri
- 191
ಶಿಗ್ಗಾವಿ: ನಗರದ ಟೆಕ್ಸಟೈಲ್ ಪಾರ್ಕನಲ್ಲಿ ನೂಲ್ ನಿಂದ ಹಿಡಿದು ಎಲ್ಲ ರೀತಿಯ ಟೆಕ್ಸಟೈಲ್‌ಗಳಿಗೆ ಅವಕಾಶವಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿಶೇಷ ಸಬ್ಸಿಡಿಗೆ ಅವಕಾಶವಿದೆ. ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಸವಣೂರ ರಸ್ತೆಯಲ್ಲಿ ತಮ್ಮ ನಿವಾಸದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಟೆಕ್ಸಟೈಲ್ ಪಾರ್ಕಿಗೆ ಬೇಕಾಗಿರುವ ಜಮೀನಿನ ಬಗ್ಗೆ ಡಿಸಿಯವರಿಂದ ಸರ್ಕಾರಕ್ಕೆ ಪ್ರಸ್ತಾವನೆ ಹೋಗಬೇಕಿದೆ ಈ ವಾರದಲ್ಲಿ ಹೋಗುತ್ತದೆ, ಬೇಕಾಗುರುವ ಇಂಡಸ್ಟೀಸ್‌ಗಳ ಡಿಮಾಂಡ ಸರ್ವೆಗಾಗಿ ಅರ್ಜಿಗಳನ್ನು ಮುಂದೆ ಕರೆಯಲಾಗುವದು ಆಸಕ್ತಿ ಇರುವ ಕಂಪನಿಯವರು ಅರ್ಜಿಗಳನ್ನು ಹಾಕಬಹುದಾಗಿದೆ, ಇದರ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿರ್ಧಾರವಾಗುತ್ತದೆ. ಸಂತ ಶಿಶುವಿನಾಳರ ಶರೀಫರ ಗದ್ದುಗೆ ಅಭಿವೃದ್ದಿಗಾಗಿ 5 ಕೋಟಿ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು ಡಿಸೆಂಬರಲ್ಲಿ ಡಿಪಿಆರ್‌ಗೆ ಅನುಮೋದನೆ ಸಿಗುವ ಸಾಧ್ಯತೆಗಳಿವೆ ಅದರ ಸಮಗ್ರ ಅಭಿವೃದ್ದಿಯ ಕೆಲಸವನ್ನು ಮಾಡಲಾಗುವದು. ಸಣ್ಣ ನೀರಾವರಿ ಯೋಜನೆಯಲ್ಲಿ ಸಣ್ಣ ಕೆರೆಗಳ ಅಭಿವೃದ್ದಿಗೆ 30 ಕೋಟಿ ರೂಗಳು ಬಿಡುಗಡೆಯಾಗಿದ್ದು ಟೆಂಡರ ಪ್ರಕ್ರೀಯೆ ಪ್ರಾರಂಭವಾಗಿದೆ, ಶಿಗ್ಗಾವಿ ಹಳೇ ಬಸ್ ನಿಲ್ದಾಣ ನವೀಕರಣಕ್ಕೆ ನಿರ್ಮಾಣಕ್ಕೆ 3 ಕೋಟಿ ರೂಗಳು ಬಿಡುಗಡೆಯಾಗಿದ್ದು ಟೆಂಡರ ಪ್ರಕ್ರೀಯೆಯನ್ನು ಮಾಡಬೇಕಿದೆ, ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಮಾಡುವ ಕಾರ್ಯ ನಡೆದಿದೆ 2 ತಿಂಗಳಲ್ಲಿ ಎಲ್ಲ ಕಾರ್ಯ ಮುಗಿಯುತ್ತದೆ, ಚನ್ನಮ್ಮ ಪುಸ್ಥಳಿಯನ್ನು ಸ್ಥಾಪಿಸುವ ಕಾರ್ಯಕ್ಕೆ ತಡೆ ಬಂದಿದ್ದು ಅದು ಕೋರ್ಟಿನಲ್ಲಿರುವ ಕಾರಣ ವ್ಯಾಜ್ಯದ ತಿರ್ಮಾನ ನೋಡಿ ಮುಂದಿನ ಕ್ರಮಕ್ಕೆ ಯೋಚಿಸಬೇಕಿದೆ ಎಲ್ಲಿ ಚನ್ನಮ್ಮ ಮೂರ್ತಿ ಸ್ಥಾಪನೆಯಾಗುತ್ತದೆಯೋ ಅಲ್ಲಿಯೇ ರಾಯಣ್ಣನ ಮೂರ್ತಿ ಸಹ ಸ್ಥಾಪನೆಯಾಗಬೇಕು ಮುಂದಿನ ದಿನಗಳಲ್ಲಿ ಆ ಕಾರ್ಯವನ್ನು ಮಾಡಲಾಗುವುದು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ ಅವರ ಮೂರ್ತಿಯೂ ಸಿದ್ದವಾಗಿದ್ದು ಅದನ್ನು ಆದಷ್ಟು ಬೇಗನೆ ಸ್ಥಾಪಿಸಲಾಗುವದು ಎಂದರು. ಈ ಸಂದರ್ಭದಲ್ಲಿ ಭಾಜಪ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ದೇವಣ್ಣ ಚಾಕಲಬ್ಬಿ ನರಹರಿ ಕಟ್ಟಿ ಇದ್ದರು.












