ಜನರ ಕಣ್ಮನ ಸೆಳೆದ ಪಾರಿವಾಳ ಹಾರಿಸುವ ಸ್ಪರ್ಧೆ
- 15 Jan 2024 , 1:23 AM
- Haveri
- 118
ಬ್ಯಾಡಗಿ: ಬಸವರಾಜ ಒಳಗುಂದಿ ಇವರ ಸ್ಮರಣಾರ್ಥವಾಗಿ ಪಾರಿವಾಳ ಹಾರಿಸುವ ಸ್ಪರ್ಧೆ ವಾಲ್ಮೀಕಿ ಸಂಘದ ಆಶ್ರಯದಲ್ಲಿ ಜರುಗಿತು. ಸೋಮವಾರದಂದು ಜರುಗಿದ ಈ ಕಾರ್ಯಕ್ರಮದಲ್ಲಿ ಹಲವು ಸ್ಪರ್ಧಾಳುಗಳು ಭಾಗವಹಿಸಿದ್ದರು. ಆಕಾಶದತ್ತ ಹಾರಾಡಿದ ಪಾರಿವಾಳಗಳು ಜನರ ಕಣ್ಮನ ಸೆಳೆದವು. ಪ್ರಥಮ ಸ್ಥಾನವನ್ನು ಮಹೇಶ ಒಳಗುಂದಿ, ದ್ವಿತೀಯ ಸ್ಥಾನ ವುಹಾನ್ ಶಾಹೀದ್, ತೃತೀಯ ಸ್ಥಾನ ಸಾಹೀದ್ ಚೌಡೇಶ್ವರಿ ಪಡೆದರು ಇವರಿಗೆ ಟ್ರೋಪಿ ಹಾಗೂ ನಗದು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ನಜೀರಅಹ್ಮದ್ ಶೇಖ್, ಮಹೇಶ ಕಾಡಸಾಲಿ, ಸುನಿಲ್ ಆಡಿನವರ ಹಾಗೂ ಇತರರು ಉಪಸ್ಥಿತರಿದ್ದರು.












