ನಿರೂಪಕಿ ಚಂದನಾ ಆತ್ಮಹತ್ಯೆ ಪ್ರಕರಣ; ಪ್ರಿಯಕರ ದಿನೇಶ್​​ ಅರೆಸ್ಟ್​​

ಬೆಂಗಳೂರು: ನಟಿ ಚಂದನಾ ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ ಜೂ.1ನೇ ತಾರಿಕಿನಂದು ಚಂದನಾ ಆತ್ಮಹತ್ಯೆಗೆ ಶರಣಾಗಿದ್ದಳು. ಸೆಲ್ಫಿ ವೀಡಿಯೋದ ಮೂಲಕ ದಿನೇಶ್​ ನನಗೆ ಮೋಸ ಮಾಡಿದ್ದಾನೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡು . ಯುವತಿಗೆ ಮೋಸ ಮಾಡಿದ ಆರೋಪದ ಹಿನ್ನಲೆ ದಿನೇಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಈ ಘಟನೆ ಸಂಬಂಧ ಸದ್ದಗುಂಟೆ ಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಈ ಕುರಿತು ತನಿಖೆ ನಡೆಸಿದ ಪೊಲೀಸರು ಇತ್ತೀಚೆಗೆ ಮದುವೆಯಾಗುವಂತೆ ದಿನೇಶ್​ಗೆ ಚಂದನಾ ಒತ್ತಾಯ ಮಾಡಿದ್ದರು. ಈಗ ಲಾಕ್​ಡೌನ್​ ಇದೆ. ಹೀಗಾಗಿ ಲಾಕ್​ಡೌನ್​ ಪೂರ್ಣಗೊಂಡ ನಂತರ ಮದುವೆಯಾಗುವುದಾಗಿ ದಿನೇಶ್​ ಭರವಸೆ ನೀಡಿದ್ದ. ಆದರೆ, ಮತ್ತೆ ಉಲ್ಟಾ ಹೊಡೆದಿದ್ದ ದಿನೇಶ್ ಹಾಗೂ ನಂಬಿಸಿ ಚಂದನಾ ಜೊತೆ ಈತ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇನ್ನು ಐದು ಲಕ್ಷ ಹಣ ಪಡೆದು ದಿನೇಶ್ ವಂಚಿಸಿದ್ದ ಎಂದು ಚಂದನಾ ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ . ಹೀಗಾಗಿ, ಚಂದನಾ ಕುಟುಂಬದವರು ಪೊಲೀಸ್​ ಠಾಣೆಗೆ ದಿನೇಶ್​ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ನಟಿ ಚಂದನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿನೇಶ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿ ಮೇ 28ರಂದು ಸಹನಟಿ ಚಂದನಾ(29) ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.ಆರೋಪಿ ದಿನೇಶ್​ನನ್ನು ಕಳೆದ 5 ವರ್ಷಗಳಿಂದ ಚಂದನಾ ಪ್ರೀತಿಸುತ್ತಿದ್ದರು. ಇಗ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಸೇಲ್ಪಿ ತೆಗೆಸಿಕೊಂಡ ಪೋಟೋಗಳು ವೈರಲ್ ಆಗಿವೆ ಇಗ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದಿನೇಶ್​​ನನ್ನು ಬಂಧಿಸಿ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.

promotions

Read More Articles