ಕಾಯಕದ ಮೂಲಕ ಸಂಭ್ರಮಾಚರಣೆಗೆ ಸಿದ್ದವಾಗಿದೆ ಯುವಾ ಬ್ರಿಗೇಡ್ ಟೀಮ್
- 15 Jan 2024 , 1:51 AM
- Belagavi
- 96
ಬೆಳಗಾವಿ: ಪ್ರತಿ ವರ್ಷ ನ.1 ಕರ್ನಾಟಕ ರಾಜ್ಯೋತ್ಸವ ದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾರೆ. ಅದರಂತೆ ಪ್ರಸಕ್ತ ವರ್ಷ ಕರ್ನಾಟಕವು 65ನೇ ರಾಜ್ಯೋತ್ಸವ ಆಚರಿಸುತ್ತಿದ್ದು, ಈ ಮಹತ್ವದ ಸಂದರ್ಭದ ಸಲುವಾಗಿ 65 ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ ಸಾಧಕರಲ್ಲಿ ಯುವ ಬ್ರಿಗೇಡ್ ಕೂಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಆಗಿದೆ. ಆ ಸಾಧಕರಿಗೆ ನಾಳೆ ನವೆಂಬರ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರಳ ಸಮಾರಂಭದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.


ಇದೆ ಯುವಾ ಬ್ರಿಗೇಡ್ ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ ಮಾಡುವ ಹೊತ್ತಲ್ಲಿ ಯುವಾ ಬ್ರಿಗೇಡ್ ಬೆಳಗಾವಿ ಜಿಲ್ಲೆಯಾದ್ಯಂತ ಕಾರ್ಯಕರ್ತರು ಸರ್ಕಾರಿ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಬಳಿದು ಸುಂದರ ರೂಪ ಕೊಡಲು ಸಿದ್ಧರಾಗಿದ್ದಾರೆ. ಅದೂ ಸರಿ ಅಲ್ಲವೇ. ಕೊರೋನಾ ಬಂದಿದೆ ಎಂದು ಎಚ್ಚರಿಕೆ ವಹಿಸಬೇಕು ಸರಿ. ಆದರೆ, ಎಷ್ಟು ದಿನ ಚಟುವಟಿಕೆಗಳನ್ನು ನಿಲ್ಲಿಸಿಯೇ ಬಿಡುವುದು ಹೇಳಿ. ಚಟುವಟಿಕೆಗಳ ಪುನರಾರಂಭವಾಗಿದ್ದು, ಬೆಳಗಾವಿ ರಾಮತೀರ್ಥ ನಗರದಲ್ಲಿ ಆಗಮಿಸಬೇಕು. ನೀವು ಹತ್ತಿರದಲ್ಲಿದ್ದರೆ ಈ ಕೆಳಗೆ ನೀಡಿರುವ ಸಂಖ್ಯೆಯನ್ನು ಸಂಪರ್ಕಿಸಿ 7259744503 ಜೊತೆಯಾಗಬಹುದು. ಬನ್ನಿ ಮತ್ತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗೋಣ. ನೀವು ನಮ್ಮೊಂದಿಗೆ ತಪ್ಪದೆ ಕೈಜೋಡಿಸಿ ಎಂದು ಯುವಾ ಬ್ರಿಗೇಡ್ ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











