ಸಿಬಿಐ ವಶದಲ್ಲಿ ಜನುಮ ದಿನ ಕಳೆಯಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ
- 15 Jan 2024 , 2:04 AM
- Belagavi
- 214
ಬೆಳಗಾವಿ: ಹಿಂಡಲಗಾ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಮತ್ತೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ಇಂದಿನಿಂದ ಮೂರು ದಿನಗಳ ವರೆಗೆ ತನಿಖೆ ನಡೆಸಲು ಸಿದ್ಧರಾಗಿದ್ದಾರೆ. ಹೌದು, ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಮೊನ್ನೆ ಬೆಳಗಾವಿ ಹಿಂಡಲಗಾ ಜೈಲಿಗೆ ರವಾನಿಸಿದ್ದರು.


ಇದರ ಬೆನ್ನಲ್ಲೇ ಇಂದು ಮತ್ತೆ ತನಿಖೆಗಾಗಿ ಸಿಬಿಐ ತಂಡ ಅವರನ್ನು ಹಿಂಡಲಗಾ ಜೈಲಿನಿಂದ ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇಂದು ವಿನಯ್ ಕುಲಕರ್ಣಿ ಅವರ ಜನುಮ ದಿನ, ಪ್ರತಿವರ್ಷ ಅಭಿಮಾನಿ ಬಳಗದವರು ಅದ್ದೂರಿಯಾಗಿ ಜನ್ಮದಿನದ ಆಚರಿಸುತ್ತಿದ್ದರು. ಆದರೆ ಈ ವರ್ಷ ಅವರ ಜನುಮ ದಿನವನ್ನು ಸಿಬಿಐ ವಶದಲ್ಲಿ ಕಳೆಯುವ ಹಾಗಾಗಿದೆ. ಇದರಿಂದ ಅಭಿಮಾನಿ ಬಳಗದವರು ಬೇಸರ ಪಡುವಂತಾಗಿದೆ.











