ಆಸ್ಪತ್ರೆಯ ರೆಸ್ಟ್ ಶೆಲ್ಟರ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಲ್. ನಾಗೇಂದ್ರ
- 14 Jan 2024 , 11:15 PM
- Mysuru
- 153
ಮೈಸೂರು: ರೋಟರಿ ಕ್ಲಬ್ [ಸೆಂಟ್ರಲ್] ವತಿಯಿಂದ ಕೆ.ಆರ್. ಆಸ್ಪತ್ರೆಗೆ ಆಗಮಿಸುವ ರೋಗಿಗಳ ಹಾಗೂ ಅವರ ಜೊತೆಯಲ್ಲಿ ಬರುವವರಿಗೆ ವಿಶ್ರಮಿಸಲು ಆಸ್ಪತ್ರೆಯ ಆವರಣದಲ್ಲಿ ರೆಸ್ಟ್ ಶೆಲ್ಟರ್ ನಿರ್ಮಾಣದ ಕಾಮಗಾರಿಗೆ ಶನಿವಾರ ದಿ. 7 ರಂದು ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ. ನಂಜರಾಜ್, ರೋಟರಿ ಕ್ಲಬ್ ಅಧ್ಯಕ್ಷ ಅಯ್ಯಣ್ಣ, ಕಾರ್ಯದರ್ಶಿ ವೀರೇಶ್, ಡಾ. ಪ್ರಹಲ್ಲಾದ್, ಭಾರತೀಯ ಜನತಾ ಪಕ್ಷದ ಮುಖಂಡ ರಾಮಚಂದ್ರ, ಸದಾಶಿವು, ಸೂರಜ್, ವಾರ್ಡ್ ಅಧ್ಯಕ್ಷ ವಿಜಯ್ ಹಾಗೂ ಇನ್ನಿತರರು ಭಾಗವಹಿಸಿದ್ದರು.












